ಮೈಸೂರು,ಜೂನ್,15,2021(www.justkannada.in): ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇದಕ್ಕೆ ಮೈಸೂರಿನಲ್ಲಿ ನಡೆದ ಐಎಎಸ್ ಅಧಿಕಾರಿಗಳ ಗಲಾಟೆಯೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೈಸೂರಿನಂತಹ ಜಿಲ್ಲೆಯ ಆಡಳಿತವೇ ಕುಸಿದ ಮೇಲೆ ಬೇರೆ ಜಿಲ್ಲೆಯ ಸ್ಥಿತಿ ಹೇಗಿರಬೇಡಾ.? ಈ ಸರ್ಕಾರ ಕುಸಿದಿರುವುದಕ್ಕೆ ಮೈಸೂರಿನ ಘಟನೆ ಪ್ರತಿಬಿಂಬದ ರೀತಿ ಕಾಣುತ್ತಿದೆ. ಸಚಿವರು ಹಾಗೂ ಸಿಎಂ ನಡುವೆ ಸಮನ್ವಯತೆ ಇಲ್ಲ. ಸಿಎಂ ಅಲ್ಲಿ ಇಲ್ಲಿ ಸಭೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಸಚಿವ ಏನು ಮಾಡುತ್ತಿದ್ದಾರೆ ನೀವೆ ಹೇಳಿ ಎಂದು ಹರಿಹಾಯ್ದರು.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರೆಯುತ್ತಾರೋ ಇಲ್ಲವೋ ಎಂಬುದು ನನಗೆ ಸಂಬಂಧಿಸದ ವಿಚಾರ. ನಿನ್ನೆ ಮೊನ್ನೆ ಮಠಕ್ಕೆ ಬಂದವರನ್ನು ಕೇಳಿದರೆ ಗೊತ್ತಾಗಬಹುದು ಎಂದರು.
ಸತ್ತವರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ವಿಚಾರಕ್ಕೆ ವ್ಯಂಗ್ಯವಾಡಿದ ಡಿಕೆ ಶಿವಕುಮಾರ್, ಅಮ್ಮನವರು ಪಟ್ಟಕ್ಕೆ ಬರುವುದರೊಳಗೆ, ಐನೋರು ಚಟ್ಟಕ್ಕೆ ಹೋಗುವ ರೀತಿ..! ಲಕ್ಷ ಪರಿಹಾರ ಕೊಡುವುದಕ್ಕಿಂತ, ಖಾಸಗಿ ಆಸ್ಪತ್ರೆಗೆ ಕಟ್ಟಿರುವ ಬಿಲ್ ನ್ನು ವಾಪಸ್ಸು ಕೊಡಿಸಿ. ಇದು ನಮ್ಮ ಆಗ್ರಹ ಎಂದರು.
Key words: IAS officer – Mysore -witnessed – administration – state-DK Shivakumar.