ಐಸಿಸಿ ರೂಲ್: ಟಿ-20 ವಿಶ್ವಕಪ್’ನಿಂದ ಬ್ಯಾಟ್ಸ್’ಮನ್ ಎನ್ನಂಗಿಲ್ಲ ! ಬ್ಯಾಟರ್ ಎನ್ನಬೇಕು…

ಬೆಂಗಳೂರು, ಸೆಪ್ಟೆಂಬರ್ 08, 2021 (www.justkannada.in): ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪುರುಷರ ಟಿ20 ವಿಶ್ವಕಪ್ ನಿಂದ ‘ಬ್ಯಾಟ್ಸ್ ಮನ್’ ಪದದ ಬದಲಿಗೆ ‘ಬ್ಯಾಟರ್’ ಎಂಬ ಪದವನ್ನು ಬಳಸಲು ನಿರ್ಧರಿಸಿದೆ.

ಮೆರಿಲ್ ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಕ್ರಿಕೆಟ್ ನಿಯಮಗಳಲ್ಲಿ ‘ಬ್ಯಾಟ್ಸ್ ಮನ್’ಗಳ ಬದಲಿಗೆ ‘ಬ್ಯಾಟರ್’ ಪದವನ್ನು ಬಳಸಲಾಗುವುದು ಎಂದು ಹೇಳಿದೆ.

ಇದೀಗ ಮಹಿಳಾ ಕ್ರಿಕೆಟ್ ಕೂಡ ಪುರುಷ ಕ್ರಿಕೆಟ್ ನಂತೆ ಜನಪ್ರಿಯತೆ ಗಳಿಸುತ್ತಿದೆ. ಆದರೆ ಕ್ರಿಕೆಟ್‍ನಲ್ಲಿ ಬ್ಯಾಟ್ಸ್‌ಮ್ಯಾನ್‌ ಎಂಬ ಪದ ಮಹಿಳಾ ಕ್ರಿಕೆಟ್‍ನಲ್ಲಿ ಸರಿಹೊಂದುತ್ತಿರಲಿಲ್ಲ. ಹಾಗಾಗಿ ಈ ಬದಲಾವಣೆ ಮಾಡಲಾಗಿದೆ.

ಈಗಾಗಲೇ ಕ್ರಿಕೆಟ್‍ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮನಾಗಿ ಬೌಲರ್ ಮತ್ತು ಫೀಲ್ಡರ್ ಎಂಬ ಪದ ಬಳಕೆಯಾಗುತ್ತಿದೆ. ಇದೀಗ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ಬ್ಯಾಟರ್ ಪದವನ್ನು ಬಳಸಲಾಗುತ್ತದೆ.