ಬೆಂಗಳೂರು, ಡಿಸೆಂಬರ್ 03, 2020 (www.justkannada.in): ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದ ನೂತನ ಐಸಿಸಿ ಟಿ20 ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ ಅಗ್ರಸ್ಥಾನ ಪಡೆದುಕೊಂಡಿದೆ.
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲಿ 3-0 ಅಂತರದ ವೈಟ್‌ವಾಶ್ ಗೆಲುವು ದಾಖಲಿಸಿದ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ನಂಬರ್ ವನ್ ಪಟ್ಟ ದಕ್ಕಿದೆ.
ನಂ.1 ಸ್ಥಾದಲ್ಲಿದ್ದ ತನ್ನ ಬದ್ಧ ಎದುರಾಳಿ ಆಸ್ಟ್ರೇಲಿಯಾಗೆ ಸಡ್ಡು ಹೊಡೆದು ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಐಸಿಸಿ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಾರಿರುವ ಆಸ್ಟ್ರೇಲಿಯಾ ತಂಡ ಇದೀಗ ತನ್ನ ಅಗ್ರಸ್ಥಾನವನ್ನು ಮರಳಿ ಪಡೆಯುವ ಅವಕಾಶ ಪಡೆದಿದೆ.
ಪ್ರವಾಸಿ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನು ಆಡಲಿರುವ ಕಾಂಗರೂ ಪಡೆ ಕನಿಷ್ಠ 2-1 ಅಂತರದಲ್ಲಿ ಸರಣಿ ಗೆದ್ದರೂ ಮರಳಿ ನಂ.1 ಸ್ಥಾನ ಪಡೆದುಕೊಳ್ಳಲಿದೆ. ಟೀಮ್ ಇಂಡಿಯಾ 3-0 ಅಂತರದಲ್ಲಿ ವೈಟ್‌ವಾಶ್ ಮಾಡಿದರೆ 2ನೇ ಶ್ರೇಯಾಂಕ ಪಡೆಯುವ ಅವಕಾಶ ಹೊಂದಿದೆ.