ಬೆಂಗಳೂರು, ಜನವರಿ 25, 2019 (www.justkannada.in): ಐಸಿಸಿ ಅಂಡರ್-19 ವಿಶ್ವಕಪ್ನಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ.
ಈಗಾಗಲೇ ಆಡಿರುವ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಗೆದ್ದಿರುವ ಪ್ರಿಯಮ್ ಗರ್ಗ್ ಪಡೆ ಕ್ವಾರ್ಟನ್ ಫೈನಲ್ಗೆ ಲಗ್ಗೆ ಇಟ್ಟಿದೆ. ನಿನ್ನೆ ನಡೆದ ನ್ಯೂಜಿಲೆಂಡ್ ಅಂಡರ್-19 ವಿರುದ್ಧದ ಪಂದ್ಯದಲ್ಲೂ ಡಕ್ವರ್ತ್ ಲುಯಿಸ್ ನಿಯಮದ ಅನ್ವಯ 44 ರನ್ಗಳಿಂದ ಗೆದ್ದು ಬೀಗಿದರು.
ಭಾರತ 23 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ 115 ರನ್ ಗಳಿಸಿದಾಗ ಜೋರಾಗಿ ಮಳೆ ಸುರಿಯಲು ಆರಂಭಿಸಿತು. ತುಂಬಾ ಸಮಯದ ಬಳಿಕ ಮಳೆ ನಿತ್ತಿತ್ತು. ಆದರ, ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ಇಲ್ಲಿಗೆ ಅಂತ್ಯಗೊಳಿಸಿ ದಕ್ವರ್ತ್ ಲುಯಿಸ್ ನಿಯಮದ ಪ್ರಕಾರ ನ್ಯೂಜಿಲೆಂಡ್ಗೆ ಗೆಲ್ಲಲು 23 ಓವರ್ನಲ್ಲಿ 192 ರನ್ಗಳ ಟಾರ್ಗೆಟ್ ನೀಡಲಾಯಿತು.
ಈ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ ಕಿರಿಯರು ರವಿ ಬಿಷ್ಟೋಯಿ ಹಾಗೂ ಅಥರ್ವ ಅಂಕೊಲ್ಕರ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. 21 ಓವರ್ನಲ್ಲಿ ಕೇವಲ 147 ರನ್ಗೆ ಸರ್ವಪತನ ಕಂಡಿತು.