ಅಕ್ರಮದಿಂದ ಸಕ್ರಮ ಮಾಡಿಕೊಳ್ಳಲು ಕೆಆರ್ ಎಸ್ ಅಣೆಕಟ್ಟೆ ಏನು ಆಶ್ರಯ ಮನೆಯಾ..? ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗರಂ….

ಮೈಸೂರು,ಜನವರಿ,25,2021(www.justkannada.in): ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಳ್ಳಿ ಎಂದು ಹೇಳಿಕೆ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಕೆಆರ್ ಎಸ್  ಸುತ್ತಮುತ್ತ ಅಕ್ರಮ ಗಣಿಗಾರಿಕೆ ವಿಚಾರ, ಕೆಆರ್  ಅಣೆಕಟ್ಟೆಯ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ ಎಂ.ಲಕ್ಷಣ್, ಹಳೇ ಮೈಸೂರು ಭಾಗದ ಜೀವನಾಡಿ ಅಪಾಯದ ಅಂಚಿನಲ್ಲಿದೆ.  ಕೆಆರ್ ಎಸ್ ಸುತ್ತಮುತ್ತ 25 ಕಿಮೀ ವ್ಯಾಪ್ತಿಯಲ್ಲಿ ಈಗಾಗಲೇ 50 ಕ್ಕೂ ಹೆಚ್ಚು ಗಣಿಗಾರಿಕೆಗಳು ನಡೆಯುತ್ತಿವೆ. ಅದರಲ್ಲಿ ಕೇವರ ಒಂದಕ್ಕೆ ಮಾತ್ರವೇ ಪರವಾನಗಿ ಇರುವುದು. ಇನ್ನುಳಿದ 49 ಗಣಿಗಾರಿಕೆಗಳು ಅಕ್ರಮವಾಗಿದೆ ಎಂದು ಆರೋಪಿಸಿದರು.illegal mining-KRS Dam –mysore-KPCC spokesperson -M. Laxman

ಮಂಡ್ಯ ಜಿಲ್ಲೆಯ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ  ಕೆಆರ್ ಎಸ್ ಅಣೆಕಟ್ಟೆ ಅಪಾಯದ ಅಂಚಿನಲ್ಲಿದೆ. ಬೇಬಿಬೆಟ್ಟದಿಂದ ಕೇವಲ 8.5 ಕಿಮೀ ದೂರದಲ್ಲಿರುವ ಕೆಆರ್ ಎಸ್ ಅಣೆಕಟ್ಟೆಗೆ ಈಗಾಗಲೇ 90 ವರ್ಷವಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಂಬ ಸರ್ಕಾರದ ಅಂಗಸಂಸ್ಥೆಯೇ ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟೆ ಕಂಪನವಾಗುತ್ತಿದೆ ಎಂದು 2019 ರಲ್ಲೇ ದಾಖಲೆಯ ಸಮೇತ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಮಾಹಿತಿ ನೀಡಿದರು.

ಅಕ್ರಮದಿಂದ ಸಕ್ರಮ ಮಾಡಿಕೊಳ್ಳಲು ಕೆಆರ್ ಎಸ್ ಅಣೆಕಟ್ಟೆ ಏನು ಆಶ್ರಯ ಮನೆಯಾ..?

ಸಿಎಂ ಬಿಎಸ್ ವೈ ಅವರ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಳ್ಳಿ ಎಂಬ ಹೇಳಿಕೆಗೆ ಗರಂ ಆದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಅಕ್ರಮದಿಂದ ಸಕ್ರಮ ಮಾಡಿಕೊಳ್ಳಲು ಕೆಆರ್ಎಸ್ ಅಣೆಕಟ್ಟೆ ಏನು ಆಶ್ರಯ ಮನೆಯಾ..? ಕೆಆರ್ ಎಸ್ ಅಣೆಕಟ್ಟೆ ಸುತ್ತಮುತ್ತ 20 ಕಿಮೀ ವ್ಯಾಪ್ತಿಯಲ್ಲಿ ಈ ಕೂಡಲೇ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆಗಳನ್ನು ನಿಲ್ಲಿಸಬೇಕು. ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ಅವರದ್ದು ನಾನ್‌ ಸೆನ್ಸ್ ಹೇಳಿಕೆ…

ಸಿಎಂ ಬಿ ಎಸ್ ಯಡಿಯೂರಪ್ಪ  ವಿರುದ್ಧ ವಾಗ್ದಾಳಿ ಮುಂದುವರೆಸಿದ ಎಂ.ಲಕ್ಷ್ಮಣ್,  ಯಡಿಯೂರಪ್ಪ ಅವರದ್ದು ನಾನ್‌ಸೆನ್ಸ್ ಹೇಳಿಕೆ  ಇದು ನಿಜಕ್ಕೂ ನಾಚಿಕೆಗೇಡಿನ ಹೇಳಿಕೆ. ಇದು ಮನೆಗಳ ಅಕ್ರಮ ಸಕ್ರಮ ಯೋಜನೆಯಲ್ಲ, ಇದು ಗಣಿಗಾರಿಕೆ. ಶಿವಮೊಗ್ಗದ ಸ್ಪೋಟಕ್ಕೆ ಸರ್ಕಾರವೇ ಹೊಣೆ. ಅಕ್ರಮ ಗಣಿಗಾರಿಕೆಯಲ್ಲಿ ಸರ್ಕಾರ ಶಾಮೀಲಾಗಿದೆ. ಅಕ್ರಮ ಗಣಿಗಾರಿಕೆಯನ್ನು ಹೇಗೆ ಸಕ್ರಮ ಮಾಡಬಹುದು ?. ಶಿವಮೊಗ್ಗದ ಗಣಿಗಾರಿಕೆಯಲ್ಲಿ ಬಿಜೆಪಿ ಪ್ರಮುಖರಿದ್ದಾರೆ. ಬಂಧಿಸಿರುವ ಆರೋಪಿಗಳಿಗೂ ಸಚಿವ ಈಶ್ವರಪ್ಪ ಮಗನಿಗೆ ಏನು ಸಂಬಂಧ ಇದೆ ? ಅದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಹಾಗೆಯೇ 1350 ಕೆಜಿ  ಸ್ಪೋಟಕ ಶಿವಮೊಗ್ಗಕ್ಕೆ ಹೇಗೆ ಬಂತು..? ಎಂದು ಎಂ .ಲಕ್ಷ್ಮಣ್ ಪ್ರಶ್ನಿಸಿದರು.

Key words: illegal mining-KRS Dam –mysore-KPCC spokesperson -M. Laxman