ಶ್ರೀಗಂಧದ ಮರ ಅಕ್ರಮ ಸಾಗಾಟ: ಆರೋಪಿಗೆ  ಜೈಲು ಶಿಕ್ಷೆ, 50 ಸಾವಿರ ರೂ. ದಂಡ

ಕೊಳ್ಳೇಗಾಲ,ನವೆಂಬರ್,16,2024 (www.justkannada.in): ಶ್ರೀಗಂಧದ ಮರವನ್ನ ಕತ್ತರಿಸಿ ಅಕ್ರಮ ವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಕೊಳ್ಳೇಗಾಲ ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ರವಿ ನಾಯ್ಕ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ.  ಪ್ರಕರಣ ಸಂಬಂಧ ಆರೋಪಿ ರವಿನಾಯ್ಕಗೆ  ಕರ್ನಾಟಕ ಅರಣ್ಯ ಕಾಯ್ದೆ ಕಲಂ: 86  ಅಡಿ  5 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಸಿ ಶ್ರೀಕಾಂತ್  ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ.

ಪ್ರಕರಣದ ವಿವರ

ಆರೋಪಿಗಳಾದ ಎ1 ರವಿನಾಯ್ಕ ಬಿನ್ ರಾಮುನಾಯ್ಕ, ಎ2 ವೆಂಕಟೇಶ್ ಬಿನ್ ಕೃಷ್ಣನಾಯ್ಕ ಹಾಗೂ  ಎ3, ಖಿಜರ್‌ಖಾನ್ ಬಿನ್ ಲೇ: ಅಜೀರ್ ಪಾಷ, ಎಂಬುವವರು ಕರ್ನಾಟಕ ಅರಣ್ಯ ಕಾಯ್ದೆಯಡಿಯಲ್ಲಿ ದಿ:4-11-18ರಂದು ಮಧ್ಯಾಹ್ನ 1.15ರ ಸಮಯದಲ್ಲಿ.ಮೋಹಿತ್ ಸಹದೇವ್, ವೃತ್ತ ನಿರೀಕ್ಷರು, ಹನೂರು ಪೋಲಿಸ್ ಠಾಣೆ, ಸಿಬ್ಬಂದಿಗಳೊಂದಿಗೆ ಕರ್ತವ್ಯದಲ್ಲಿದ್ದಾಗ ಹನೂರಿಗೆ ಸೇರಿದ ಲೊಕ್ಕನಹಳ್ಳಿ ಗ್ರಾಮದ ದೊಡ್ಡ ಸಂಪಿಗೇಶ್ವರ ದೇವಾಲಯ & ಸರ್ಕಾರಿ ಅಸ್ಪತ್ರೆ ನಡುವಿನ ಗಿರಿಜನ ಅಶ್ರಮ ಶಾಲೆ ಮುಂದೆ ರಸ್ತೆ ಬದಿಗೆ ಒಡೆಯರಪಾಳ್ಯದ ಕಡೆಯಿಂದ ಹೋಂಡಾ ಆಕ್ಟಿವಾ ಬೈಕಿನಲ್ಲಿ ಬಂದು ರಸ್ತೆ ಬದಿ ನಿಂತಿದ್ದರು. ಈ ವೇಳೆ ಕೊಳ್ಳೇಗಾಲದ ಕಡೆಯಿಂದ ಸ್ವಿಪ್ಟ್ ಡಿಸೈರ್ ಟೂರ್ ಕಾರಿನಲ್ಲಿ ಬಂದು ಇವರ ಪಕ್ಕ ನಿಲ್ಲಿಸಿ ಇಳಿದು ಬಂದ ಎ3ಖಿಜರ್ ಖಾನ್ ಜೊತೆ ಮಾತಾಡಿದ್ದು, ನಂತರ ಅರೋಪಿ 3 ಖಿಜರ್ ಖಾನ್   ಬೈಕ್ ನ ಮುಂದೆ ಗಂಧದ ಮರದ ತುಂಡು ತುಂಡು ಪೀಸುಗಳಿರುವ ಒಂದು ಚೀಲವನ್ನೇ ತಂದು, ತನ್ನ ಕಾರಿನ ಡಿಕ್ಕಿಗೆ ಹಾಕಿ ಮತ್ತೊಂದು ಚೀಲವನ್ನು ತರಲು ಮುಂದಾದಾಗ ಪೋಲಿಸರು ದಾಳಿ ನಡೆಸಿದ್ದಾರೆ.

ಈ ವೇಳೆ  ಆರೋಪಿಗಳು 2 ಚೀಲಗಳಲ್ಲಿ ಒಟ್ಟು 20 ಕೆ.ಜಿ. 870 ಗ್ರಾಂ ತೂಕ ಇದ್ದ ಅತಿ ಹೆಚ್ಚಿನ ಮೌಲ್ಯ ಇರುವ ಶ್ರೀಗಂಧದ ಮರದ ಒಟ್ಟು 111 ತುಂಡು ತುಂಡು ಪೀಸುಗಳನ್ನು ಅರಣ್ಯದಿಂದ ಕತ್ತರಿಸಿ ತಂದು ಅಕ್ರಮವಾಗಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದು ಕಂಡು ಬಂದಿದೆ.  ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಮಾನ್ಯ ನ್ಯಾಯಾಲಯಕ್ಕೆ ಕರ್ನಾಟಕ ಅರಣ್ಯ ಕಾಯ್ದೆ ಕಲಂ: 86 87 ಮೊ.ನಂ.239/18 ರಂತೆ ಪ್ರಕರಣ ದಾಖಲಿಸಿಕೊಂಡು ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೊಳ್ಳೇಗಾಲ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಹನೂರು ಪೋಲಿಸ್‌ ಠಾಣೆ ವೃತ್ತ ನಿರೀಕ್ಷಕ ಹಾಗೂ ತನಿಖಾಧಿಕಾರಿ ರವಿನಾಯ್ಕ ಸಲ್ಲಿಸಿದ್ದರು.

ಅದರಂತೆ ವಿಚಾರಣೆ ನಡೆಸಿ, ನ್ಯಾಯಾಲಯವು ಈ ಪ್ರಕರಣದಲ್ಲಿ 1 ಆರೋಪಿ ರವಿನಾಯ್ಕ ಬಿನ್ ರಾಮುನಾಯ್ಕ, ಎಂಬುವವರಿಗೆ ಕರ್ನಾಟಕ ಅರಣ್ಯ ಕಾಯ್ದೆ ಕಲಂ: 86 ರಡಿ ಈ ಕೆಳಕಂಡಂತೆ ಶಿಕ್ಷೆ ವಿಧಿಸಿದೆ.

2ನೇ ಆರೋಪಿ ವೆಂಕಟೇಶ್ ಬಿನ್ ಕೃಷ್ಣನಾಯ್ಕ ವಿಚಾರಣೆ ಸಮಯದಲ್ಲಿ ಮೃತಪಟ್ಟಿದ್ದು, 3ನೇ ಆರೋಪಿ ಅ ಬಿಜರ್‌ಖಾನ್ ಬಿನ್ ಲೇ: ಅಜೀರ್ ಪಾಷ, ಕಲಂ: 87 ಕರ್ನಾಟಕ ಅರಣ್ಯ ಕಾಯ್ದೆಯಡಿ ಬಿಡುಗಡೆ ಮಾಡಲಾಗಿದೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ಅವರು ವಿಚಾರಣೆ ನಡೆಸಿದರು.

Key words: Illegal, transportation, sandal wood, Jail sentence, accused, court