ಮೈಸೂರು,ಜು,2,2020(www.justkannada.in): ಪುರಾತನ ವಿಷ್ಣು ವಿಗ್ರಹ ಮೂರ್ತಿಯನ್ನ ಅಕ್ರಮವಾಗಿ ಇಟ್ಟುಕೊಂಡ ಆರೋಪದ ಮೇಲೆ ಮೈಸೂರಿನ ಪ್ರಖ್ಯಾತ ಮರಳು ಕಲಾಕೃತಿ ಕಲಾವಿದೆ ಗೌರಿ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಿ.ನರಸೀಪುರದ ಬಿಳಿಗೆರೆ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಗತಕಾಲದ ವಿಷ್ಣುಮೂರ್ತಿಯೊಂದು ಬಿದ್ದಿತ್ತು. ಅದನ್ನ ಕಂಡ ಮರಳು ಕಲಾವಿದೆ ಗೌರಿ ವಿಗ್ರಹಮೂರ್ತಿಯನ್ನ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ನೀಡುವುದಾಗಿ ಹೇಳಿ ಗೌರಿ ಆ ವಿಗ್ರಹಮೂರ್ತಿಯನ್ನ ಗ್ರಾಮಸ್ಥರಿಂದ ಪಡೆದಿದ್ದರು. ಗ್ರಾಮಸ್ಥರಿಂದ ಪಡೆದು ತಂದಿದ್ದ ಮೂರ್ತಿಯನ್ನ ಗೌರಿ ತನ್ನ ಬಳಿಯೇ ಇಟ್ಟುಕೊಂಡಿದ್ದರು.
ಈ ಮಾಹಿತಿ ತಿಳಿದ ಬಿಳಿಗೆರೆ ಗ್ರಾಮಸ್ಥರು ಗೌರಿ ಅವರ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಮಾಡಲು ಗೌರಿ ಅವರನ್ನ ವಶಕ್ಕೆ ಪಡೆದಿದ್ದಾರೆ. ಕೆ.ಆರ್.ಎಸ್ ರಸ್ತೆಯಲ್ಲಿರುವ ಗೌರಿ ನಿವಾಸಕ್ಕೆ ಟಿ.ನರೀಸಪುರ ಠಾಣಾ ಪೊಲೀಸರು ಭೇಟಿ ನೀಡಿದ್ದು ವಿಷ್ಣು ಮೂರ್ತಿ ಹಾಗು ಗೌರಿಯನ್ನು ವಶಕ್ಕೆ ಪಡೆದಿದ್ದಾರೆ.
ಮಗಳನ್ನ ವಶಕ್ಕೆ ಪಡೆದ ಹಿನ್ನೆಲೆ ಗೌರಿ ತಾಯಿ ಪೊಲೀಸರು ತಪ್ಪು ಮಾಹಿತಿಯಿಂದ ನನ್ನ ಮಗಳನ್ನ ವಶಕ್ಕೆ ಪಡೆದಿದ್ದಾರೆಂದು ಆರೋಪ ಮಾಡಿದ್ದಾರೆ. ಸದ್ಯ ಪೊಲೀಸರ ಮರಳು ಕಲಾವಿದೆ ಗೌರಿ ವಿಚಾರಣೆಯಲ್ಲಿದ್ದಾರೆ. ಗೌರಿ ಚಾಮುಂಡಿಬೆಟ್ಟ ರಸ್ತೆಯಲ್ಲಿ ಸ್ಯಾಂಡ್ ಮ್ಯೂಸಿಯಂ ನಿರ್ಮಾಣ ಮಾಡಿದ್ದಾರೆ.
Key words: illegally -Vishnu – statue – police –arrest-Mysore