ಮೈಸೂರು,ಜುಲೈ,14,2021(www.justkannada.in): ನಾನು ಸಿಎಂ ಹುದ್ದೆ ರೇಸ್ ನಲ್ಲಿ ಇಲ್ಲ. ನಾನು ಈಗ ಗೃಹ ಸಚಿವ ಇದರಲ್ಲಿ ಇರುತ್ತೇನೆ ಗೃಹ ಸಚಿವರಾಗಿರುತ್ತೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ನಗರದ ಜ್ಯೋತಿ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ಸಶಸ್ತ್ರ ಮೀಸಲು ಘಟಕದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಕೆ ಮಹದೇವು, ತನ್ವಿರ್ ಸೇಠ್ , ಎಂ ಎಲ್ ಸಿ ವಿಶ್ವನಾಥ್, ಕೆಪಿಎ ನಿರ್ದೇಶಕ ವಿಫುಲ್ ಕುಮಾರ್, ಪೊಲೀಸ್ ಆಯುಕ್ತ ಚಂದ್ರಗುಪ್ತ ಸೇರಿದತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ನಾನು ಈಗ ಹೋಂ ಮಿನಿಸ್ಟರ್, ಹೋಂ ನಲ್ಲಿ ಇದ್ದೇನೆ. ಹೋಂನಲ್ಲೇ ಇರುತ್ತೇನೆ, ನನಗೆ ಇಷ್ಟೇ ಸಾಕು. ಇದೂ ಕೂಡಾ ಕೇಂದ್ರ ಸರ್ಕಾರ ನೀಡುರುವ ಜವಾಬ್ದಾರಿ. ನಾನು ಏನೋ ಹೇಳಿ, ನೀವು ಅದಕ್ಕೆ ಇನ್ಯಾರದ್ದೊ ಪ್ರತಿಕ್ರಿಯೆ ಪಡೆಯುತ್ತೀರಿ ಎಂದು ಹೇಳಿದರು.
ಸಂಸದೆ ಸುಮಲತಾ ಅಂಬರೀಶ್ ಹೆಸರು ಹೇಳಿದ್ದಕ್ಕೆ ಶಾಸಕ ತನ್ವಿರ್ ಸೇಠ್ ಗೆ ನಯವಾಗಿ ಚಾಟಿ ಬೀಸಿದ ಸಂಸದ ಪ್ರತಾಪ್ ಸಿಂಹ.
ಕಾರ್ಯಕ್ರಮದ ವೇಳೆ ಸಂಸದೆ ಸುಮಲತಾ ಅಂಬರೀಶ್ ಹೆಸರು ಹೇಳಿದ್ದಕ್ಕೆ ಶಾಸಕ ತನ್ವಿರ್ ಸೇಠ್ ಗೆ ಸಂಸದ ಪ್ರತಾಪ್ ಸಿಂಹ ನಯವಾಗಿ ಚಾಟಿ ಬೀಸಿದ ಘಟನೆ ನಡೆಯಿತು.
ಶಂಕುಸ್ಥಾಪನೆ ಸ್ಥಳಕ್ಕೆ ಜನಪ್ರತಿನಿಧಿಗಳನ್ನ ಕರೆಯದೆ ತೆರಳಿದ್ದಕ್ಕೆ ಶಾಸಕ ತನ್ವಿರ್ ಸೇಠ್ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಬಳಿಕ ಈ ವಿಚಾರವನ್ನ ಗೃಹ ಸಚಿವರಿಗೆ ತನ್ವೀರ್ ಸೇಠ್ ತಿಳಿಸಿದರು.
ನಾವು ಮಂಡ್ಯ ಸಂಸದೆ ಸುಮಲತಾ ಬಂದು ಕುಳಿತಿದ್ದೇವೆ. ನಮ್ಮನ್ನ ಕರೆಯದೆ ಬಂದಿದ್ದೀರಿ ಎಂದು ಪೊಲೀಸ್ ಅಧಿಕಾರಿಗಳಿಗೆ ಶಾಸಕ ತನ್ವೀರ್ ಸೇಠ್ ಹೇಳಿದರು. ಈ ವೇಳೆ ಸಂಸದೆ ಸುಮಲತಾ ಹೆಸರು ಹೇಳಿದ್ದಕ್ಕೆ ಶಾಸಕ ತನ್ವೀರ್ ಸೇಠ್ ಗೆ ನಯವಾಗಿ ಚಾಟಿ ಬೀಸಿದ ಸಂಸದ ಪ್ರತಾಪ್ ಸಿಂಹ. ಕರೆದುಕೊಂಡು ಬಂದಿದ್ದು ನೀವು, ಬೇರೆಯವರ ಹೆಸರೇಳ್ತಾ ಇದೀಯಲ್ಲಣ್ಣ, ಏನೋ ಚುನಾವಣೆಯಲ್ಲಿ ಸಹಾಯ ಮಾಡಿದ್ದೀರಾ ಅಂತ ಗೊತ್ತು ಎಂದು ತನ್ವಿರ್ ಸೇಠ್ ಗೆ ಪ್ರತಾಪ್ ಸಿಂಹ ನಗುತ್ತಲೇ ಚಾಟಿ ಬೀಸಿದರು.
ಕಾರ್ಯಕ್ರಮಕ್ಕೆ ಮುಂಚೆ ಬಂದು ಸಂಸದೆ ಸುಮಲತಾ, ಶಾಸನ ತನ್ವಿರ್ ಸೇಠ್, ಸಂಸದ ಪ್ರತಾಪ್ ಸಿಂಹ ಎಂಎಲ್ ಎಸ್ ವಿಶ್ವನಾಥ್ ಕಾಯುತ್ತಿದ್ದರು. ಮಳೆ ಬೀಳುತ್ತಿದ್ದರಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗಾಡ್ ಆಫ್ ಆನರ್ ಸ್ಬೀಕರಸಿ ನೇರವಾಗಿ ಶಂಕುಸ್ಥಾಪನೆ ಸ್ಥಳಕ್ಕೆ ತೆರಳಿದ್ದರು.
Key words: I’m- not – CM –race-Minister- Basavaraja Bommai -mysore