ಐಎಂಎ ವಂಚನೆ ಕೇಸ್: 12ಸಾವಿರಕ್ಕೂ ಹೆಚ್ಚು ದೂರು: ಇಡಿಯಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಗೆ ಚಿಂತನೆ…

ಬೆಂಗಳೂರು,ಜೂ,12,2019(www.justkannada.in): ಐಎಂಎ  ಜ್ಯುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಸಾವಿರಕ್ಕೂ ಹೆಚ್ಚು ದೂರು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈ ನಡುವೆ ಸುಮಾರು 12 ಸಾವಿರಕ್ಕೂ ಹೆಚ್ಚು ಹೂಡಿಕೆದಾರರು ದೂರು ದಾಖಲಿಸಿದ್ದಾರೆ. ಜೂನ್ 10 ರಂದು 3250 ದೂರುಗಳು ದಾಖಲಾಗಿದ್ದರೇ ನಿನ್ನೆ 8ಸಾವಿರಕ್ಕೂ ಹೆಚ್ಚು ದೂರು ನೀಡಲಾಗಿದೆ. ಇಂದು ಬೆಳಿಗ್ಗೆಯಿಂದ ಸುಮಾರು 1500 ದೂರುಗಳು ಬಂದಿವೆ ಎನ್ನಲಾಗಿದೆ.

ಶಿವಾಜಿನಗರದ ಎಎಸ್ ಕನ್ವೆನ್ಸನ್ ಹಾಲ್ ನಲ್ಲಿ ದೂರು ನೀಡಲು ಪೊಲೀಸರು ವ್ಯವಸ್ಥೆ ಮಾಡಿದ್ದು, ರಾಜ್ಯದ ವಿವಿಧೆಡೆಯಿಂದ ಹೂಡಿಕೆದಾರರು ಬಂದು ದೂರು ನೀಡುತ್ತಿದ್ದಾರೆ. ಇನ್ನು 12ಸಾವಿರಕ್ಕೂ ಹೆಚ್ಚು ದೂರು ಬಂದಿರುವ ಹಿನ್ನೆಲೆ, ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ಚಿಂತನೆ ನಡೆಸಿದೆ ಎನ್ನಲಾಗಿದೆ.

Key words: IMA fraud case: over 12,000 complaints filed

#IMA #fraud #12000complaints. #bangalore