ಬೆಂಗಳೂರು,ಜೂ,15,2019(www.justkannada.in): ಐಎಂಎ ಜ್ಯುವೆಲ್ಲರಿ ಮನ್ಸೂರ್ ಅಲಿಖಾನ್ ಮೋಸ ಕುರಿತು ನಮ್ಮ ಸಂಸದರು.ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಲಿದ್ದಾರೆ. ಐಎಂಎ ಸಂತ್ರಸ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆಗೆ ವಿರೋಧ, ಸಾಲಮನ್ನಾಗೆ ಆಗ್ರಹ ಮತ್ತು ಐಎಂಎ ಸಂತ್ರಸ್ಥರಿಗೆ ನ್ಯಾಯಕೊಡುವಂತೆ ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಐಎಂಎ ಜ್ಯುವೆಲ್ಲರಿ ಮನ್ಸೂರ್ ಅಲಿಖಾನ್ ಮೋಸ ಕುರಿತು ನಮ್ಮ ಸಂಸದರು. ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಲಿದ್ದಾರೆ. ಸರ್ಕಾರ ಇದುವರೆಗೂ ಸಕ್ಷಮ ಪ್ರಾಧಿಕಾರ ರಚನೆ ಮಾಡಿಲ್ಲ ಇದರಿಂದ ಇಂತಹ ಅನಾಹುತ ಆಗಿದೆ, ಈ ವಿಚಾರದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಮೃದು ಧೊರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ಇದು ಅನುಮಾನ ಮೂಡಿಸುತ್ತಿದೆ ಎಂದು ಹೇಳಿದರು.
ಐಎಂಎ ಸಂತ್ರಸ್ತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಅಗತ್ಯವಿದ್ದರೆ ಮೊಹಾಲ್ಲಾಗಳಲ್ಲಿ ಪ್ರತಿಭಟನಾ ಹೋರಾಟ ನಡೆಸಲಾಗುವುದು. ಹಣ ವಾಪಾಸ್ ಕೊಡಿಸಲಿಕ್ಕೆ ಬಿಜೆಪಿ ಪಕ್ಷದ ವತಿಯಿಂದ ಪ್ರಯತ್ನ ನಡೆಸಲಾಗುವುದು. ಮನ್ಸೂರ್ ಎಲ್ಲೇ ಇದ್ದರೂ ಅವನನ್ನು ಹಿಡಿದು ತರುತ್ತೇವೆ. ಈಗಾಗಲೇ ಇಡಿಯವರು ಕೆಲಸ ಶುರು ಮಾಡಿದ್ದಾರೆ ಎಂದು ತಿಳಿಸಿದರು.
Key words: IMA- fraudcase-protest- BS Yeddyurappa-bangalore