ಬೆಂಗಳೂರು,ಜುಲೈ,11,2023(www.justkannada.in): ರಾಜ್ಯದಲ್ಲಿ ಅನಧಿಕೃತ ಶಾಲೆಗಳ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳಲಾಗುತ್ತದೆ. ಹಾಗೆಯೇ ಸ್ಕೂಲ್ ಬ್ಯಾಗ್ ಹೊರೆ ಇಳಿಸಲು ತೀರ್ಮಾನ ಮಾಡಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧುಬಂಗಾರಪ್ಪ, ಅನಧಿಕೃತ ಶಾಲೆಗಳ ವಿಚಾರ. ಈಗಾಗಲೇ ಸಮಾಯಾವಕಾಶ ನೀಡಲಾಗಿದೆ. ಅನಧೀಕೃತ ಶಾಲೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಸ್ಕೂಲ್ ಬ್ಯಾಗ್ ಹೊರೆ ಇಳಿಸಲು ತೀರ್ಮಾನ ಮಾಡಲಾಗಿದ್ದು ತಜ್ಞರ ಮಟ್ಟದಲ್ಲಿ ಚರ್ಚೆ ಮಾಡಿ ನಿರ್ಧರಿಸಲಾಗಿದೆ ಎಂದರು.
ಪಠ್ಯ ಪರಿಷ್ಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧುಬಂಗಾರಪ್ಪ, ಪ್ರಣಾಳಿಕೆಯಲ್ಲಿ ಹೇಳಿದಂತೆ ಪರಿಷ್ಕರಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪಠ್ಯ ಪರಿಷ್ಕರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಶಿಕ್ಷಕರ ವರ್ಗಾವಣೆಗಾಗಿ 87ಸಾವಿರ ಅರ್ಜಿ ಬಂದಿದ್ದವು. ಅರ್ಜಿ ಪರಿಶೀಲಿಸಲು ಸೂಚನೆ ನೀಡಲಾಗಿದೆ ಖಾಲಿ ಇರುವ ಶಾಲೆಗೆ ಹೆಚ್ಚವರಿ ಶಿಕ್ಷಕರು ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ವಾರಕ್ಕೆ ಎರಡು ದಿನ ಮೊಟ್ಟೆ ಕೊಡಲು ನಿರ್ಧಾರ ಮಾಡಲಾಗಿದೆ . ಎಸ್ ಡಿಎಂಸಿ ಅಕೌಂಟ್ ಗೆ ಹಣ ಹೋಗುತ್ತದೆ. ಮೊಟ್ಟ ತಿನ್ನದವರಿಗೆ ಚಿಕ್ಕಿ ಬಾಳೇಹಣ್ಣನ್ನು ನೀಡುತ್ತೇವೆ ಎಂದರು.
Key words: Immediate- action – unauthorized –schools-Education Minister- Madhu Bangarappa.