ಮೈಸೂರು,ಡಿಸೆಂಬರ್,14,2020(www.justkannada.in): ಕೋವಿಡ್ ನೆಪವೊಡ್ಡಿ ಸ್ಥಗಿತಗೊಳಿಸಿರುವ ‘ಶುಚಿ ಯೋಜನೆ’ಯನ್ನ ತತ್ ತಕ್ಷಣವೇ ಮುಂದುವರಿಸಿ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಗ್ರಾಮೀಣ ಭಾಗಗಲ್ಲಿ ಹೆಣ್ಣು ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ. ಋತುಚಕ್ರದ ಸಮಯದಲ್ಲಿ ಈಗಲೂ ಹಳೇ ಬಟ್ಟೆಗಳನ್ನು ಗ್ರಾಮೀಣ ಭಾಗದ ಮಹಿಳೆಯರು ಬಳಸುತ್ತಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ಅನೇಕ ಪರಿಣಾಮಗಳು ಉಂಟಾಗುತ್ತದೆ. ಆದರೆ ಕೋವಿಡ್ ನೆಪವೊಡ್ಡಿ ಸರ್ಕಾರ ಶುಚಿ ಯೋಜನೆ ಸ್ಥಗಿತ ಮಾಡಿದೆ. ಆದ್ರೆ ಋತು ಚಕ್ರ ಯಾವ ಕೋವಿಡ್-19ಗೂ ನಿಲ್ಲುವುದಿಲ್ಲ. ಸರ್ಕಾರ ಉಚಿತವಾಗಿ ಹೆಣ್ಣು ಮಕ್ಕಳಿಗೆ ಪ್ಯಾಡ್ ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿ ಮನ್ ಕಿ ಬಾತ್ ಮಾಡುತ್ತಾರೆ. ಭೇಟಿ ಪಡಾವೋ ಬೇಟಿ ಬಚಾವೋ ಎನ್ನುತ್ತಾರೆ. ಆದ್ರೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷ ನಮ್ಮ ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಕೊಡುವ ಭರವಸೆ ನೀಡಿದ್ದೆವು. ಈ ಮಧ್ಯೆ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರುತ್ತೆ. ಆಗ ಮತ್ತೆ ಖಂಡಿತ ಮಹಿಳೆಯರಿಗೆ ಉಚಿವಾಗಿ ಪ್ಯಾಡ್ ಗಳನ್ನು ಕೊಟ್ಟೆ ಕೊಡುತ್ತೇವೆ. ಇದು ರಾಜಕೀಯವಲ್ಲ, ಸಾವಿನ ಮೇಲೆ ನೋವಿನ ಮೇಲೆ ರಾಜಕೀಯ ಸರಿಯಲ್ಲ. ಶೋಭಕ್ಕಾ, ಶಶಿಕಲಾ ಅಕ್ಕ ನಿಮ್ಮ ಸರ್ಕಾರದಿಂದ ನಮ್ಮ ಹೆಣ್ಣುಮಕ್ಕಳ ಕಡೆ ಗಮನ ಕೊಡಿ ಎಂದು ಹೇಳಿದರು.
Key words: Immediately – Continue-suchi plan- clean up – kpcc-women- president- Dr. Pushpa Amarnath