ಬೆಂಗಳೂರು, ನವೆಂಬರ್,2,2020(www.justkannada.in): ಆರ್. ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 34 ಸಾವಿರ ಸೆಟ್ ಟಾಪ್ ಬಾಕ್ಸ್ ಅನ್ನು ಉಚಿತವಾಗಿ ನೀಡಿದ್ದಾರೆ. ಇದನ್ನು ಅವರೇ ಖುದ್ದು ಒಪ್ಪಿಕೊಂಡಿದ್ದಾರೆ. ಹೀಗಾಗಿ ತಕ್ಷಣ ಅವರನ್ನು ಅನರ್ಹ ಮಾಡಬೇಕು ಎಂದು ಚುನಾವಣಾಧಿಕಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.
ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಉಪ ಚುನಾವಣೆ ನಡೆಯುತ್ತಿರುವ ರಾಜರಾಜೇಶ್ವರಿ ನಗರದಲ್ಲಿ 40 ಸಾವಿರ ಬೋಗಸ್ ಮತದಾರರಿದ್ದಾರೆ. ಖಾಲಿ ಸೈಟ್ ನಲ್ಲಿ ಮನೆ ಇದೆ ಎಂದು ಐಡಿ ಕಾರ್ಡ್ ವಿತರಣೆ ಮಾಡಲಾಗಿದೆ. ಕ್ಷೇತ್ರದಲ್ಲಿ ನಕಲಿ ಐಡಿಕಾರ್ಡ್ ಅಕ್ರಮ ನಡೆದಿದೆ. ಸರ್ಕಾರವೂ ಐಡಿಕಾರ್ಡ್ ಅಕ್ರಮದಲ್ಲಿ ಶಾಮೀಲಾಗಿದೆ. ಹೀಗಾಗಿ ನಕಲಿ ಐಡಿ ಕಾರ್ಡ್ ಹೊಂದಿರುವವರನ್ನ ಬಂಧಿಸಿ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಮುನಿರತ್ನರ ಆದಾಯ ಕೂಡ ಹೆಚ್ಚಾಗಿದೆ. 1ವರ್ಷದಲ್ಲಿ 40 ಕೋಟಿ ರೂ ಹೆಚ್ಚಾಗಿದೆ. ಈ ಬಗ್ಗೆ ಐಟಿ-ಇಡಿ ತನಿಖೆಯಾಗಲಿ. ನಮ್ಮ ಮೇಲೆ ಸಿಎಂ ತನಿಖೆಗೆ ಅನುಮತಿ ಕೊಟ್ಟಿಲ್ವಾ? ಮುನಿರತ್ನ ಆದಾಯ ಹೆಚ್ಚಳ ಬಗ್ಗೆ ತನಿಖೆಯಾಗಬೇಕು ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
Key words: Immediately- disqualify -BJP candidate –Muniratna – kpcc-president-DK Shivakumar