ಮೈಸೂರು,ಆ,15,2019(www.justkannada.in): ರಾಜ್ಯದಲ್ಲಿ ಭಾರಿಮಳೆ ಪ್ರವಾಹದಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಕೂಡಲೇ ಸಚಿವ ಸಂಪುಟ ರಚನೆಯಾಗಲಿ ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದ ಮಾಜಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ, ಸರ್ಕಾರವೊಂದು ರಚನೆಯಾಗಿ 20 ದಿನಗಳಾದ್ರು ಅಧಿಕಾರಿಗಳ ಮೂಲಕ ಧ್ವಜಾರೋಹಣ ಮಾಡಿರೋದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಸರ್ಕಾರ ಇದ್ದರೂ ಇದನೆಲ್ಲ ನೋಡಿದ್ರೆ ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯೋತ್ಸವನ್ನ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಿತ್ತು. ಹೀಗಾಗಿ ಇನ್ನಾದ್ರೂ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡಲಿ.. ಜನ ಸಂಕಷ್ಟದಲ್ಲಿದ್ದಾರೆ. ನೆರೆ ಹಾವಳಿ ಇದೆ, ಜನರ ನೆರವಿಗೆ ಧಾವಿಸಲಿ ಎಂದು ಮನವಿ ಮಾಡಿದರು.
2019ರ ದಸರಾ ಮಹೋತ್ಸವ ಉದ್ಘಾಟನೆಗೆ ಹಿರಿಯ ಸಾಹಿತಿ ಎಸ್. ಎಲ್ ಭೈರಪ್ಪ ಹೆಸರು ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಈ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ಸರ್ಕಾರ ತೀರ್ಮಾನ ಮಾಡಿದ್ದಾರೆ, ದಸರಾ ಒಂದು ನಾಡಹಬ್ಬ ಆಗಿರುವ ಕಾರಣ ನಾನು ಯಾವುದೇ ಹೇಳಿಕೆ ನೀಡಿ ಗೊಂದಲ ಉಂಟುಮಾಡಲ್ಲ ಎಂದರು.
ಹುಣಸೂರು ವಿಧಾನಸಭಾ ಉಪಚುನಾವಣೆ ಕುರಿತಂತೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಉಪಚುನಾವಣೆಗೆ ಪಕ್ಷ ಸಂಘಟನೆ ಮಾಡಲು ಪಕ್ಷ ನನ್ನನ್ನ ನೇಮಿಸಿದೆ. ಹುಣಸೂರು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ, ಈ ಹಿನ್ನೆಲೆಯಲ್ಲಿ ನನ್ನನ್ನ ನೇಮಿಸಿದ್ದಾರೆ. ಕೋಮುವಾದಿ ಪಕ್ಷ ಬಿಜೆಪಿಯನ್ನ ಹೊರಗಿಡುವ ಹಿನ್ನೆಲೆ ಪಕ್ಷ ಸಂಘಟನೆ ಅಗತ್ಯವಾಗಿದೆ. ಆ ಮೂಲಕ ಗೆಲುವು ದಾಖಲಿಸಬೇಕಿದೆ ಎಂದು ಹೇಳಿದರು.
Key words: Immediately -formation – Cabinet-Former Minister HC Mahadevappa- demand-mysore