ಮೈಸೂರು,ಸೆಪ್ಟಂಬರ್,9,2022(www.justkannada.in): ಹೃದಯಘಾತವಾದ ಸಂದರ್ಭದಲ್ಲಿ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿ 30 ನಿಮಿಷ ತಡ ಮಾಡಿದರೆ 7 ಪರ್ಸೆಂಟ್ ಸಾವಿನ ಪ್ರಮಾಣ ಹೆಚ್ಚಾಗುತ್ತದೆ. ಹೃದಯಘಾತ ಆದಾಗ ಗೋಲ್ಡನ್ ಅವರ್ ಅಂಥ ಇದ್ದು, ಆ ಸಮಯದಲ್ಲಿ ರೋಗಿಯ ಉಳಿಸುವ ಪ್ರಯತ್ನ ಪ್ರಯತ್ನ ಮಾಡಬೇಕು ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಸಿಎನ್ ಮಂಜುನಾಥ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಡಾ. ಸಿಎನ್ ಮಂಜುನಾಥ್ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು ಹೃದ್ರೋಗ ಸಮಸ್ಯೆಗಳ ಕುರಿತು ಮಹತ್ವದ ಸಲಹೆಗಳನ್ನ ನೀಡಿದರು.
ಇಂತ್ತು ಜಯದೇವ ಹೃದ್ರೋಗ ಸಂಸ್ಥೆ ೧೮೦೦ ಹಾಸಿಗೆ ಹೊಂದಿರುವ ಇಂದು ಇಡೀ ದಕ್ಷಿಣ ಏಷ್ಯಾದ ದೊಡ್ಡ ಆಸ್ಪತ್ರೆಯಾಗಿದೆ. ಅದು ನಮ್ಮ ಹೆಮ್ಮೆ. ಸರ್ಕಾರದ ಒಂದು ಆಸ್ಪತ್ರೆಯನ್ನ ಪಂಚತಾರೆ ಆಸ್ಪತ್ರೆಯನ್ನಾಗಿ ಮಾಡಬೇಕೆಂಬ ಕನಸಿತ್ತು. ಆ ಕನಸು ನನಸಾಗಿದೆ. ಆಸ್ಪತ್ರೆಯ ಮೇಲೆ ನಂಬಿಕೆ ವಿಶ್ವಾಸ ಇಡಬೇಕು. ಒಂದು ಚಿಕಿತ್ಸೆ ಕಾಯಿಲೆಗಿಂತ ದುಬಾರಿಯಾಗಬಾರದು. ರೋಗಿಯ ಆರ್ಥಿಕ ಹಿನ್ನೆಲೆ ಇಟ್ಟುಕೊಂಡು ಅವರಿಗೆ ಸಾಧ್ಯವಾಗುವ ಮಟ್ಟಿಗೆ ಚಿಕಿತ್ಸೆ ಕೊಡಬೇಕು. ಎಷ್ಟೋ ಬಾರಿ ರೋಗಿ ಬದುಕುವುದೇ ಇಲ್ಲ ಅಂಥ ಗೊತ್ತಾದರೆ ರೋಗಿಗಳ ಸಂಬಂಧಗಳ ಜೊತೆ ಕರೆದು ಮಾತನಾಡಬೇಕು ಸತ್ತವನು ಸತ್ತ ಇದ್ದವರು ಲಕ್ಷಾಂತರ ರೂ. ಕಳೆದುಕೊಳ್ಳುವಂತೆ ಮಾಡಬೇಡಿ ಎಂದು ಡಾ.ಸಿ.ಎನ್ ಮಂಜುನಾಥ್ ತಿಳಿಸಿದರು.
ಅಸಾಂಪ್ರದಾಯಿಕ ರೋಗಿಗಳಿವೆ. ಅದು ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ಪಾರ್ಶ್ವ ವಾಯು, ಬ್ಲೆಡ್ ಪ್ಲಸರ್, ಒಂಟಿತನ ಅಡಿಕ್ಷನ್ ಇವು ಆಗಿವೆ. ಮೊದಲು ಮಕ್ಕಳು ತಂದೆ ತಾಯಿಗಳನ್ನ ಆಸ್ಪತ್ರೆ ಗೆ ಕರೆತರುತ್ತಿದ್ದರು ಆದರೆ, ಈಗ ಅವರ ತಂದೆ ತಾಯಿಗಳೇ ತಮ್ಮ ಮಕ್ಕಳನ್ನು ಆಸ್ಪತ್ರೆ ಗೆ ಕರೆತರುವ ಪರಿಸ್ಥಿತಿ ಇದೆ. ಈಗ 10 ರಿಂದ 20 ವರ್ಷಗಳಷ್ಟು ಬೇಗ ಕಾಯಿಲೆಗಳು ಬರುತ್ತಿದೆ. ಶೇ 30 ಹೃದಯಘಾತ ಕೇವಲ 45 ವರ್ಷಗಳ ಒಳಗಿರುವವರಿಗೆ ಬರುತ್ತಿದೆ. ಪಟ್ಟಣ ಮತ್ತು ಹಳ್ಳಿಗಳಲ್ಲಿ ಜೀವನ ಶೈಲಿ ಒಂದೇ ಆಗುತ್ತಿದೆ ಮೊದಲು ಹಳ್ಳಿಗಳಲ್ಲಿ ಈ ಕಾಯಿಲೆ ಕಡಿಮೆ ಇತ್ತು. ಈಗ ಅಲ್ಲೂ ಕೂಡ ಹೆಚ್ಚಳವಾಗಿದೆ ಎಂದು ಸಿ.ಎನ್ ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.
ಶೇ 50 ರಷ್ಟು ಧೂಮಪಾನ ಮಾಡುವವರಿಗೆ ಹೃದಯಘಾತ ಆಗುತ್ತದೆ. ಕೆಲವರಿಗೆ ಅಧಿಕ ರಕ್ತದ ಒತ್ತಡ, ಶೇಕಡಾ 16ರಷ್ಟು ಚಿಕ್ಕ ವಯಸ್ಸಿನಲ್ಲಿ ಹೃದಯಘಾತ ಆಗುತ್ತವೆ. ಇದು ಎರಿಡಿಟಿ ಕಾರಣಗಳೂ ಇರುತ್ತವೆ. ಕುಟುಂಬದಲ್ಲಿ ಹೃದಯಘಾತ ಆಗುತ್ತಿದ್ದರೆ ಇಲ್ಲೂ ಎರಿಟಿಡಿ ಮುಖ್ಯವಾಗಿರುತ್ತದೆ. ಮಕ್ಕಳು ಹೇಳಬಹುದು ಏನ್ ಆಸ್ತಿ ಮಾಡಿದ್ದೀಯಾ ಅಂಥ ಕೇಳ್ತಾರೆ. ತಂದೆ ತಾಯಿ ದೀರ್ಘ ಆಯಸ್ಸು ಬದುಕಿದ್ದರೆ ಸಾಕು. ಅವರ ಮಕ್ಕಳೂ ಕೂಡ ಲಾಂಗ್ ಲೈಫ್ ಇರುತ್ತಾರೆ. ಒತ್ತಡ ಅನ್ನೋದು ಹೊಸ ಧೂಮಪಾನ ಎನ್ನಬಹದು. ಎಲ್ಲರಿಗೂ ಒಂದೊಂದು ರೀತಿ ಒತ್ತಡಗಳಿರುತ್ತವೆ. ಇದಕ್ಕೆ ಕಾರಣ ಅಳತೆ ಮೀರಿದ ಅಪೇಕ್ಷೆಗಳು ಕಾರಣ. ಚಿಕ್ಕ ಮಕ್ಕಳಿಂದಲೇ ಒತ್ತಡ ಶುರವಾಗುತ್ತವೆ. ಅದರಿಂದ ಕಾಯಿಲೆಗಳು ಬರುತ್ತದೆ. ಮನುಷ್ಯ ನ ಅವರವರ ಮನೋಭಾವ ಅವರ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡದ ಬದುಕಿನಿಂದ ದೂರವಾಗಬೇಕು ಹರಿ,ವರಿ ಕರಿ ಯಿಂದ ಹೃದಯ ಸಂಬಂಧಿ ಕಾಯಿಲೆ ಉಲ್ಬಣವಾಗುತ್ತದೆ ಎಂದರು.
ಶರೀರದ ತೂಕಕ್ಕೂ ರಕ್ತದ ಕೊಲೆಸ್ಟ್ರಾಲ್ ಗೂ ಯಾವುದೇ ಸಂಬಂಧ ಇಲ್ಲ
ಶರೀರದ ತೂಕಕ್ಕೂ ರಕ್ತದ ಕೊಲೆಸ್ಟ್ರಾಲ್ ಗೂ ಯಾವುದೇ ಸಂಬಂಧ ಇಲ್ಲ. ಈ ಮನೋಭಾ ವ ಇರಬಾರದು. ವಾಯು ಮಾಲಿನ್ಯದಿಂದ ಉಸಿರಾಟದ ತೊಂದರೆ ಬರುತ್ತಿತ್ತು. ಈಗ ವಾಯುಮಾಲಿನ್ಯದಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಇಂಡಸ್ಟ್ರೀಸ್ ಗಳಿಂದಾಗುವ ವಾಯುಮಾಲಿನ್ಯದಿಂದಲೂ ಹೃದಯಘಾತಕ್ಕೆ ಕಾರಣವಾಗಬಹುದು. ಹೃದಯದ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಮಣ್ಣುನ ಮಾಲಿನ್ಯದಿಂದಲೂ ಆಗುತ್ತಿದೆ. ಹೃದಯಘಾತದ ಲಕ್ಷಣಗಳು ಹೃದಯದ ಎಡಭಾಗದಲ್ಲಿ ನೋವು ಬರಬಹುದು, ಉರಿ ಬರಬಹುದು. ಕೆಲವು ವೇಳೆ ಇವೆಲ್ಲ ಇರುವುದಿಲ್ಲ ದವಡೆಯಲ್ಲೂ ನೋವು ಬರವಹುದು, ಬೆನ್ನು ನೋವು, ಉರಿ ,ನಡೆದಾಗ ಸುಸ್ತಾದಾಗ ಇದು ಕೂಡ ಸಿಂಪ್ಟಮ್ ಇರುತ್ತದೆ. ಅಸಿಡಿಟಿ, ಹೃದಯಘಾತ ಎರಡಕ್ಕೂ ಕನ್ಫೂಸ್ ಆಗಬಹುದು ಎಂದು ಡಾ.ಸಿಎನ್ ಮಂಜುನಾಥ್ ಮಾಹಿತಿ ನೀಡಿದರು.
ಐದು ‘S’ ಗಳನ್ನು ನಿಯಂತ್ರಣ ಮಾಡಬೇಕು.
ಹೃದಯಘಾತ ಆದ ಮೇಲೆ 12 ಗಂಟೆ ಆದರೆ ಆತ ಬದುಕುಳಿದರೂ ಬುದ್ದಿ ಶಕ್ತಿ ಕಡಿಮೆಯಾಗುತ್ತದೆ. ನಮ್ಮ ಭಾರತದಲ್ಲಿ 35 ವರ್ಷ ದಾಟಿದ ಗಂಡಸರು, 45 ವರ್ಷ ದಾಟಿದ ಮಹಿಳೆಯರು ಮೆಡಿಕಲ್ ಆನಿವರ್ಸರಿ ಚೆಕ್ ಅಪ್ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಐದು S ಗಳನ್ನು ನಿಯಂತ್ರಣ ಮಾಡಬೇಕು. ಸ್ಮೋಕ್, ಸ್ಪಿರಿಟ್, ಸ್ಯಾನಿಟರಿ ಲೈಫ್, ಸಾಲ್ಟ್ ಮತ್ತು ಸ್ಟ್ರೆಸ್ ನಿಯಂತ್ರಣ ಮಾಡಬೇಕು. ಬ್ಲಡ್ ಪ್ಲಸರ್ ಇರುವವರು ನಿರ್ಲಕ್ಷ್ಯ ಮಾಡಬಾರದು. ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು . ಕೆಲವರಿಗೆ ಆಸ್ಪತ್ರೆ ಗೆ ಹೋದರೆ ಬ್ಲಡ್ ಪ್ಲಸರ್ ಹೆಚ್ಚಾಗುತ್ತದೆ. ಇಂದು ವಾರ್ಷಿಕ ೩೦ ಲಕ್ಷ ಹೃದಯ ಸಂಬಂಧಿ ಕಾಯಿಲೆಯಿಂದ ಸಾವು ಸಂಭವಿಸುತ್ತಿವೆ. ಏಳು ಲಕ್ಷ ಸಕ್ಕರೆ ಕಾಯಿಲೆಗೆ ಸಾವಾಗುತ್ತಿವೆ. ವಾರಕ್ಕೆ ಒಮ್ಮೆ ಒಂದು ಬಾರಿ ಒಳ್ಳೆ ಊಟ ಮಾಡಬೇಕು. ಡಯೆಟ್ ಅಂಥ ಊಟವನ್ನು ಗಣನೀಯ ಕಡಿಮೆಯಾಗಬಾರದು. ನಗು, ಒತ್ತಮ ಗೆಳೆತನ, ಪಾಸಿಟಿವ್ ನೆಸ್ , ವಾಕಿಂಗ್ ಎಲ್ಲಾ ನವ ಚೈತನ್ಯ ಉಂಟುಮಾಡುತ್ತದೆ ಎಂದು ಹೇಳಿದರು.
ಯಾರಾದರೂ 4 ರಿಂದ 5 ಗಂಟೆ ಕುಳಿತಲ್ಲೇ ಕುಳಿತರೇ 5 ಸಿಗರೇಟು ಸೇದಿದಕ್ಕೆ ಸಮ
ಭಾರತದಲ್ಲಿ ಶೇ 51 ರಷ್ಟು ಸೋಮಾರಿತನ ಇದೆ. ಇವತ್ತಿನ ಆಧುನಿಕ ಪ್ರಪಂಚದಲ್ಲಿ ಯಾರು ಕಾಲು ನಡಿಗೆ ಮಾಡೋದೆ ಕಡಿಮೆ. ಸೈಕಲ್ ಗಳು ಕಣ್ಮರೆಯಾಗುತ್ತಿವೆ. ಫಾಸ್ಟ್ ಫುಡ್ ಫಾಸ್ಟ್ ಆಗಿಯೇ ಜೀವ ತಗೆಯುತ್ತದೆ. ಮೊಬೈಲ್ ಫೋನ್, ಸಿಟ್ಟಿಂಗ್ ಡಿಸೀಸ್ ಯಾರಾದರೂ 4 ರಿಂದ 5 ಗಂಟೆ ಕುಂತಲ್ಲೇ ಕೂತರೆ 5 ಸಿಗರೇಟು ಸೇದಿದಕ್ಕೆ ಸಮ. ಹಾಗಾಗಿ ಎಲ್ಲೂ ಕೂತಲ್ಲೇ ಕೂರಬಾರದು, ಮೊಬೈಲ್ ಫೋನ್ ಹೆಚ್ಚು ಬಳಸಬಾರದು, ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ನಾಲಿಗೆ ರುಚಿ ಬಿಡಿ ಸಾತ್ವಿಕ ಆಹಾರ ಸೇವಿಸಿ. ದುಡಿದು ಸಾಯುವವರಿಗಿಂತ ಚಂತೆಯಿಂದ ಸಾಯುವವರೇ ಹೆಚ್ಚಾಗಿದೆ. ಈ ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರಿಕೆ ವಹಿಸಿ. ಸುಳ್ಳು, ತಪ್ಪು ಸಂದೇಶಗಳನ್ನ ಕೊಟ್ಟು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿವೆ ಎಂದು ಸಲಹೆ ನೀಡಿದರು.
ನಮ್ಮ ಜಯದೇವ ಹೃದ್ರೋಗ ಸಂಸ್ಥೆ ನಮ್ಮ ರಾಜ್ಯಕ್ಕೆ ದೇಶಕ್ಕೆ ಬಂದ ಮಾನ್ಯತೆ ಇದು. ಬೆಂಗಳೂರಲ್ಲಿ ಇನ್ನೊಂದು ವಾರದಲ್ಲಿ ಮತ್ತೊಂದು ಘಟಕ ಆರಂಭವಾಗುತ್ತಿದೆ. ನಮ್ಮಲ್ಲಿ 105 ಹೃದ್ರೋಗ ತಜ್ಞರು ಕೆಲಸ ಮಾಡುತ್ತಾರೆ ಅದು ದೇಶದಲ್ಲಿ ಒಳ್ಳೆಯ ಬೆಳವಣಿಗೆ. ಮೈಸೂರು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಪ್ರತಿ ತಿಂಗಳಿಗೆ 1000 ದಷ್ಟು ಆಂಜಿಯೋಗ್ರಾಂ ಚಿಕಿತ್ಸೆ ನಡೆಯುತ್ತದೆ. ಇನ್ನೊಂದು ತಿಂಗಳಲ್ಲಿ ಹುಬ್ಬಳ್ಳಿಯಲ್ಲೂ ೪೫೦ ಹಾಸಿಗೆ ಆಸ್ಪತ್ರೆ ಆರಂಭವಾಗುತ್ತದೆ ಮತ್ತು ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಗೆ 350 ಹಾಸಿಗೆಗೆ ಇನ್ಫೋಸಿಸ್ ನ್ ಸುಧಾಮೂರ್ತಿ ಕೊಡುಗೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಒಂದು ಸಾವಿರ ಹಾಸಿಗೆ ಉಳ್ಳ ಜಯದೇವ ಹೃದ್ರೋಗ ಆಸ್ಪತ್ರೆ ಇರೋದು ದೇಶದಲ್ಲೇ ಮೊದಲು ಎಂದರು.
ಹೈ ಇಂಟೆನ್ಸಟಿ ಜಿಮ್ ಮಾಡೋರು ಒಂದು ಕಾರ್ಡಿಯಾಕ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಹೃದಯದ ತಿಕ್ ನೆಸ್ ಜಾಸ್ತಿ ಇರುತ್ತದೆ. ನಟ ಪುನಿತ್ ಅವರದ್ದು ಅವರ ಮನೆಯಲ್ಲಿ ಎಲ್ಲರಿಗೂ ಹೃದಯಘಾತ ಆಗಿತ್ತು. ಅದು ಅವರ ಎರಿಡಿಟಿಯಿಂದಾಗಿ ಅವರಿಗೂ ಹೃದಯಘಾತ ಆಯ್ತು. ಕೆಲವು ವೇಳೆ ಸಡನ್ ಡೆತ್ ಆಗುತ್ತದೆ. ಎರಡಿಟಿ ಸಮಸ್ಯೆ ಇರೋರು ಅದಷ್ಟು ಪರೀಕ್ಷೆ ಮಾಡಿಸಿಕೊಂಡು ಜಾಗೃತಿ ವಹಿಸಬೇಕು ಎಂದು ಡಾ. ಸಿಎನ್ ಮಂಜುನಾಥ್ ರಿಂದ ಸಲಹೆ ನೀಡಿದರು.
Key words: important- suggestions – heart disease- problems- CN Manjunath-mysore