ಬ್ಯಾಂಕ್‌ ವ್ಯವಹಾರಗಳಲ್ಲಿ ಕನ್ನಡಕ್ಕೆ ಆಧ್ಯತೆ ನೀಡಿ : ಕನ್ನಡಪರ ಸಂಘಟನೆಗಳ ಆಗ್ರಹ

Give priority to Kannada in bank affairs: Demand of pro-Kannada organizations. The pro-Kannada activists have protested against the forced imposition of Hindi in banks and post offices and have submitted a petition in this regard and demanded that Hindi Not be imposed in business.

 

ಬೆಂಗಳೂರು, ಅ.24,2024: (www.justkannada.in news) ಬ್ಯಾಂಕ್‌ ಹಾಗೂ ಅಂಚೆ ಕಚೇರಿಗಳಲ್ಲಿ ಬಲವಂತವಾಗಿ ಹಿಂದಿ ಹೇರಿಕೆ ವಿರೋಧಿಸಿ ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದು, ಈ ಸಂಬಂಧ ಮನವಿ ಪತ್ರ ಸಲ್ಲಿಸಿ ವ್ಯವಹಾರಗಳಲ್ಲಿ ಹಿಂದಿ ಹೇರಿಕೆ ಕೈ ಬಿಡುವಂತೆ ಒತ್ತಾಯಿಸಿದ್ದಾರೆ.

ಕನ್ನಡಪರ ಹೋರಾಟಗಾರರಾದ, ಚಿತ್ರ ನಿರ್ಮಾಪಕ ಸಾ.ರ.ಗೋವಿಂದು, ನಾರಾಯಣಗೌಡ ಹಾಗೂ ಮತ್ತಿತರರು ಈ ಸಂಬಂಧ ಮನವಿ ಸಲ್ಲಿಸಿದ್ದು, ಪತ್ರದಲ್ಲಿ ಹೀಗಿದೆ..

ಕರ್ನಾಟಕ ರಾಜ್ಯದ ಭೌಗೋಳಿಕ ಪ್ರದೇಶದೊಳಗೆ ನಿಮ್ಮ ವ್ಯವಹಾರ ವಹಿವಾಟುಗಳನ್ನು ನಡೆಸುವಾಗ ಕನ್ನಡ ಭಾಷಾ ಬಳಕೆಗೆ ಮೊದಲ ಆದ್ಯತೆ ನೀಡದೆ ನಿರ್ಲಕ್ಷಿಸುತ್ತಿರುವುದು ಕಂಡುಬರುತ್ತಿದೆ. ಇದಲ್ಲದೆ ಹಿಂದಿ ಭಾಷೆಯನ್ನು ಬ್ಯಾಂಕ್, ಅಂಚೆ ಕಚೇರಿ, ಜೀವವಿಮಾ ವ್ಯವಹಾರಗಳಲ್ಲಿ ಒತ್ತಾಯಪೂರ್ವಕವಾಗಿ ಕನ್ನಡಿಗರ ಮೇಲೆ ಹೇರುತ್ತಿದ್ದೀರಿ.

ಇಂಡಿಯಾ ಒಕ್ಕೂಟದ ಸಂವಿಧಾನವು ನಮ್ಮ ಭಾಷೆಯ ರಕ್ಷಣೆ ಹಾಗೂ ಬೆಳವಣಿಗೆಯನ್ನು ಖಾತ್ರಿಪಡಿಸಿದೆ. ಹೀಗಿದ್ದಾಗಲೂ ನಿಮ್ಮ ಸಾರ್ವಜನಿಕ ಸಂಸ್ಥೆಯಲ್ಲಿ ಕನ್ನಡ ಬಳಸದೆ ವ್ಯವಸ್ಥಿತವಾಗಿ ನಿರ್ಲಕ್ಷಿಸುವ ಮೂಲಕ ಕರ್ನಾಟಕದ ಕೋಟ್ಯಾಂತರ ಕನ್ನಡಿಗರ ಮೂಲಭೂತ ಹಕ್ಕುಗಳು, ಮಾನವ ಹಕ್ಕುಗಳಿಗೆ ಧಕ್ಕೆ ತರುತ್ತಿದ್ದೀರಿ. ಗ್ರಾಹಕರ ಹಕ್ಕುಗಳ ಕಾಯಿದೆಯ ನಿಯಮಗಳನ್ನು ನೀವುಗಳು ಉಲ್ಲಂಘಿಸುತ್ತಿದ್ದು, ಇದು ಗಂಭೀರ ಅಪರಾಧವಾಗಿದೆ.

ನಿಮ್ಮ ಸಂಸ್ಥೆಯ ಮೂಲಕ ಹಿಂದಿ ಹೇರಿಕೆಯ ವಿಚಾರವು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದಿ ಭಾಷೆಯು ಕನ್ನಡ ಭಾಷೆಗೆ ಅಥವಾ ಕರ್ನಾಟಕಕ್ಕೆ ಯಜಮಾನ ಭಾಷೆಯಲ್ಲ ಎಂಬುದನ್ನು ಘೋಷಿಸುತ್ತಾ ಈ ಕೆಳಕಂಡ ವಿಚಾರಗಳ ಬಗ್ಗೆ ಕ್ರಮ ವಹಿಸಬೇಕೆಂದು ಆಗ್ರಹಿಸುತ್ತೇವೆ.

1) ಕರ್ನಾಟಕದಲ್ಲಿ ಸಾರ್ವಜನಿಕರೊಂದಿಗೆ ನಡೆಸುವ ಯಾವುದೇ ಪತ್ರ ವ್ಯವಹಾರಗಳು, ಅರ್ಜಿ ಫಾರಂಗಳು, ಚಲನ್ ಗಳು, ಡಿಜಿಟಲ್ ಬೋರ್ಡ್‌ಳು, ನಾಮಫಲಕಗಳು, ಎ.ಟಿ.ಎಂ. ಮೆಷಿನ್‌ಗಳು, ಘೋಷಣೆಗಳು, ಎಸ್.ಎಂ.ಎಸ್ ಸಂದೇಶಗಳು, ಸಾರ್ವಜನಿಕ ಪ್ರಕಟಣೆಗಳಲ್ಲಿ ಹಿಂದಿ ಭಾಷೆಯನ್ನು ಬಳಸಕೂಡದು. ಈ ಎಲ್ಲ ವಿಭಾಗಗಳಲ್ಲೂ ಕಡ್ಡಾಯವಾಗಿ ಕನ್ನಡ ಬಳಸಬೇಕು.

2) ಕನ್ನಡ ಭಾಷೆ ತಿಳಿಯದವರನ್ನು ಕರ್ನಾಟಕದ ಶಾಖೆಗಳಲ್ಲಿ ಕೆಲಸ ಮಾಡಲು ನಿಯೋಜಿಸಬಾರದು.

3) ಹಿಂದಿ ದಿವಸ್ ಆಚರಣೆ, ಹಿಂದಿ ಕಲಿಕೆಗೆ ಪ್ರೋತ್ಸಾಹ ಮುಂತಾದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಮಾರಕವಾಗುವ ಚಟುವಟಿಕೆಗಳನ್ನು ಮುಂದುವರೆಸಕೂಡದು.

4) ಕರ್ನಾಟಕ ಭೌಗೋಳಿಕ ವ್ಯಾಪ್ತಿಯಲ್ಲಿ ಸೃಷ್ಟಿಯಾಗುವ ಉದ್ಯೋಗಗಳನ್ನು ಪ್ರತ್ಯೇಕ ನೇಮಕಾತಿ ನಿಯಮ ರೂಪಿಸಿ, ಲಿಖಿತ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯಗೊಳಿಸುವ ಮೂಲಕ ಭರ್ತಿ ಮಾಡಬೇಕು.

5) ಕರ್ನಾಟಕ ಜನತೆಯು ಶ್ರಮದಿಂದ ಕಟ್ಟಿ ಬೆಳೆಸಿರುವ ಬ್ಯಾಂಕ್‌ಗಳನ್ನು ಉತ್ತರ ಭಾರತದ ಬ್ಯಾಂಕುಗಳ ಜತೆ ವಿಲೀನಗೊಳಿಸುವ ಪ್ರಕ್ರಿಯೆ ನಿಲ್ಲಿಸಬೇಕು.

6) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್‌ಗಳು ವಿಲೀನ ರದ್ದುಪಡಿಸಿ ಅವನ್ನು ಕನ್ನಡಿಗರಿಗೆ ಹಿಂದಿರುಗಿಸಬೇಕು.

ತಾವು ಕರ್ನಾಟಕದಲ್ಲಿ ಕನ್ನಡದಲ್ಲಿ ವ್ಯವಹರಿಸುವುದಾಗಿ ಹಾಗೂ ಹಿಂದಿ ಹೇರಿಕೆ ಮಾಡದಿರುವ ಬಗ್ಗೆ ಇಲ್ಲಿನ ನಾಗರಿಕರಿಗೆ ಖಚಿತಪಡಿಸಲು ಒಂದು ಬಹಿರಂಗ ಪ್ರಕಟಣೆ ನೀಡಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.

key words: Give priority to Kannada, in bank affairs, Demand of pro-Kannada, organizations, stop, imposing Hindi in banks

SUMMARY:

Give priority to Kannada in bank affairs: Demand of pro-Kannada organizations. The pro-Kannada activists have protested against the forced imposition of Hindi in banks and post offices and have submitted a petition in this regard and demanded that Hindi Not be imposed in business.