ನವದೆಹಲಿ,ಮಾರ್ಚ್,19,2021(www.justkannada.in): ಕಲಬುರಗಿ ರೈಲ್ವೆ ಡಿವಿಷನ್ ಕಚೇರಿಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.
ಸದನದಲ್ಲಿ ಇಂದು ಮೊದಲನೇ ಪ್ರಶ್ನೆಯಾಗಿ 8 ವರ್ಷಗಳಾದರೂ 2014 ರ ಕೇಂದ್ರ ಬಜೆಟ್ ನಲ್ಲಿ ಮಂಜೂರಾಗಿದ್ದರು ಸಹ ಕಾರ್ಯರೂಪಕ್ಕೆ ಬರದ ಕಲಬುರಗಿ ರೈಲ್ವೆ ಡಿವಿಷನ್ ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂಬ ಪ್ರಶ್ನೆಗೆ ರೈಲ್ವೆ ಮಂತ್ರಿ ಪಿಯೂಷ್ ಗೋಯಲ್ ಉತ್ತರ ಕೊಟ್ಟರು.
ಕಲಬುರಗಿ ರೈಲ್ವೆ ಡಿವಿಷನ್ ಕಚೇರಿಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದರು. ರೈಲ್ವೆ ಸಚಿವರ ಹೇಳಿಕೆಗೆ ಸಂಸದರಾದ ಜಿ.ಸಿ ಚಂದ್ರಶೇಖರ್ ಮತ್ತು ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಆಕ್ರೋಶವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಪುನರ್ ಪರಿಶೀಲಿಸುವುದಾಗಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ರವರು ಹೇಳಿಕೆ ನೀಡಿದರು.
ಇನ್ನು 151 ರೈಲ್ ಗಳನ್ನು ಖಾಸಗೀಕರಣ ಮಾಡುತ್ತಿದ್ದು ಇದಾದ ನಂತರ ಉದ್ಯೋಗದ ನೋಟಿಫಿಕೇಶನ್ ತಡೆಹಿಡಿಯಲಾಗಿದ್ದು ಇದರಿಂದ ಸಾಮಾನ್ಯಜನರಿಂದ ಉದ್ಯೋಗದ ಅವಕಾಶಗಳನ್ನು ಕಸಿಯುವಂತೆ ಆಗುವುದಿಲ್ಲವೇ ಹಾಗು ಒಂದು ಕಡೆ ‘ಆತ್ಮ ನಿರ್ಭರ ಭಾರತ’ ಎಂದು ಹೇಳುತ್ತಾ ಜೆರ್ಮನ್ ಹಾಗು ಫ್ರಾನ್ಸ್ ಮೂಲದ ಖಾಸಗಿ ಕಂಪನಿಗಳು ರೈಲ್ವೆಯ ಟಾಪ್ 5 ಕಂಪನಿಗಳಾಗಿದ್ದು ಇದರ ಬಗ್ಗೆ ರೈಲ್ವೆ ಸಚಿವಾಲಯ ಏನು ಹೇಳುತ್ತದೆ ಎಂದು ಪ್ರಶ್ನೆ ಕೇಳಲಾಯಿತು.
ಮಂತ್ರಿಗಳು ಉದ್ಯೋಗ ಆಕಾಶದಿಂದ ಉದುರುವುದಿಲ್ಲ ಎಂದು ಉದ್ದಟತನದ ಮಾತಾಡಿ ಸದನದಲ್ಲಿ ಉತ್ತರ ಕೊಟ್ಟಾಗ ವರ್ಷಕ್ಕೆ 2 ಕೋಟಿ ಉದ್ಯೋಗ ಭರವಸೆ ಏನಾಯಿತು ಎಂದು ಸಂಸದ ಚಂದ್ರಶೇಖರ್ ಹೇಳದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.
Key words: Impractical –Kalburgi – Railway Division-Outrage – Central- Railway Minister’s- statement