ಕೋವಿಡ್ ಸಂಕಷ್ಟದ ನಂತರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ – ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು, ನವೆಂಬರ್ ,23,2021(www.justkannada.in): ಕೋವಿಡ್ ಸಂಕಷ್ಟದ ನಂತರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಮಾಧ್ಯಮದವರ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೋವಿಡ್ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಕೋವಿಡ್ 2 ವರ್ಷದಲ್ಲಿ ದೇಶ ರಾಜ್ಯದಲ್ಲಿ ಆರ್ಥಿಕ ಹಿಂಜರಿತವಾಗಿತ್ತು. ಈಗ ಕೋವಿಡ್ 2 ನೇ ಅಲೆಯನ್ನು ವ್ಯಾಪಕವಾಗಿ ಲಸಿಕೆ ನೀಡುವ ಮುಖಾಂತರ ಯಶಸ್ವಿಯಾಗಿ ನಿರ್ವಹಿಸಿರುವ  ಹಿನ್ನೆಲೆಯಲ್ಲಿ ಎಲ್ಲಾ ರಂಗಗಳಲ್ಲೂ ಆರ್ಥಿಕ ಚಟುವಟಿಕೆ ಪ್ರಾರಂಭವಾಗಿ ಉತ್ತಮಗೊಂಡಿದೆ ಎಂದು ತಿಳಿಸಿದರು.

ಜಿಎಸ್ ಟಿ ಸಂಗ್ರಹ ಈಗ 1,30,000 ಕೋಟಿ ರೂ. ಕಳೆದ ತಿಂಗಳಲ್ಲಿ ಆಗಿದೆ. ಈ ಬಾರಿಯೂ ಕೂಡ 1,20,000 ಕೋಟಿ ರೂ. ಸಂಗ್ರಹದ ನಿರೀಕ್ಷೆ ಇದೆ. ಆರ್ಥಿಕತೆ ಅಭಿವೃದ್ಧಿಯ ಆಗುತ್ತಿರುವ ಬಗ್ಗೆ ಸ್ಪಷ್ಟ ದಿಕ್ಸೂಚಿ. ರಾಜ್ಯದಲ್ಲೂ ಕೂಡ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ಹಲವಾರು ಕ್ರಮಗಳನ್ನು , ಕೆಲವರಿಗೆ ಗುರಿಗಳನ್ನು ನೀಡಿ, ಅನುಸರಣೆ ಕಡಿಮೆ ಇರುವಲ್ಲಿ, ಅನುಸರಣೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಿಎಸ್ ಟಿ ಸಂಗ್ರಹದಲ್ಲಿ ರಾಜ್ಯದ ಪಾಲು ಮೂರು ತಿಂಗಳಿಗೊಮ್ಮೆ ಸರಿಯಾಗಿ ಬರುತ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ವಸತಿ ಯೋಜನೆಗಳ ಪ್ರಗತಿ:

ಸಚಿವ ಸಂಪುಟದಲ್ಲಿ 5 ಲಕ್ಷಗಳ ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿ, 4 ಲಕ್ಷ ಗ್ರಾಮೀಣ  ಹಾಗೂ 1 ಲಕ್ಷ ನಗರ ಪ್ರದೇಶದಲ್ಲಿ ವಸತಿ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ.

ಅಮೃತ ಯೋಜನೆಯಲ್ಲಿ 750 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಸತಿರಹಿತರಿಗೆ ಮನೆಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ. ಒಂದೂವರೆ ವರ್ಷದಲ್ಲಿ  4 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

Key words: Improvement – financial situation –after- covid –hardship-CM Basavaraja Bommai.

ENGLISH SUMMARY…

Economy on the path of recovery after the slump during Covid: CM Bommai

Bangalore. Nov 23.

Economy of the state is recovering after suffering setback during the Covid pandemic, Chief Minister Basavaraj Bommai said.

Speaking to media persons after visiting rain affected areas of Kolar district he said, “economy of the country and the state suffered huge setback over the last 2 years due to Covid pandemic. Economy of the state in all sectors is showing good recovery after successfully managing the vaccination campaign.”

GST collection had touched Rs1,30,000 crore last month and it is expected to be around Rs1,20,000 crore this month. Targets have been set on tax collection and action is being taken to ensure better compliance. State is getting its share of GST collection every quarter, the Chief Minister said.

Progress of Housing Projects

Replying to a question on providing houses for those who have been rendered homeless, Bommai said, cabinet had cleared construction of 5 lakh houses. Respective district administration had been instructed to select the beneficiaries from each Gram Panchayat limits. Of these 4 lakh houses would be in rural areas and 1 lakh in urban areas.