ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಉದ್ಘಾಟನೆ: ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬೇಕು- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನವೆಂಬರ್ 24,2023(www.justkannada.in):  ಬೆಂಗಳೂರಿನಲ್ಲಿ ಸರಗಳ್ಳತನ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಹಾಗೂ ಕೊಲೆಗಳೂ ಕೂಡ ನಡೆಯುತ್ತಿವೆ. ಕಾನೂನುಬಾಹಿರ ಚಟುವಟಿಕಗೆಗಳಿಗೆ ಕಡಿವಾಣ ಹಾಕಲು ನಿರ್ಭಯಾ ನಿಧಿಯಡಿ ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡ ನಿರ್ಮಾಣವಾಗಿದೆ. ಇದರ ಸದುಪಯೋಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಸಿಎಂ ಸಿದ್ದರಾಮಯ್ಯ, ಇಂಥ ಸೌಲಭ್ಯಗಳು ಜನರಿಗೆ ತಲುಪಿದಾಗ, ಅದು ಉಪಯೋಗಕ್ಕೆ ಬಂದಾಗ ಮಾತ್ರ ಸಾರ್ಥಕವಾಗುತ್ತದೆ. 668 ಕೋಟಿ ವೆಚ್ಚದಲ್ಲಿ ಕಮಂಡ್ ಸೆಂಟರ್  ನಿರ್ಮಾಣವಾಗಿದೆ. ನಿರೀಕ್ಷಿತ ಫಲ ಸಿಕ್ಕದೇ ಹೋದರೆ ಕಷ್ಟ. ಬೆಂಗಳೂರು ನಗರದಲ್ಲಿ ಸಂಚಾರ  ದಟ್ಟಣೆ, ಮಹಿಳೆಯರ ಮೇಲೆ ದೌರ್ಜನ್ಯ, ಒಂಟಿ ಮನೆಗಳಿರುವಲ್ಲಿ, ವೃದ್ಧರು ಒಂಟಿಯಾಗಿರುವಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದರು.

ಅಪರಾಧಗಳು ನಡೆಯದ ರೀತಿ ತಡೆಯಬೇಕು

ಅಪರಾಧವಾದ ನಂತರ ಶಿಕ್ಷೆ ಕೊಡುವುದು ಒಂದು ಭಾಗ. ಆದರೆ ಅಪರಾಧಗಳು ನಡೆಯದ ರೀತಿ ತಡೆಯಬೇಕು. ಬೆಂಗಳೂನಲ್ಲಿ ಕೊಲೆಯಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿಗಳ ಕೊಲೆ ಪ್ರಕರಣವನ್ನು ಉದಾಹರಿಸಿದ  ಸಿಎಂ ಸಿದ್ದರಾಮಯ್ಯ, ಇಂಥವು ನಡೆಯದಂತೆ ನೋಡಿಕೊಳ್ಳಬೇಕು ಎಂದರು. ಅದಕ್ಕೆ ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು. ಪೋಲಿಸರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕೆಂದರು.

ಬೆಂಗಳೂರು ಸುರಕ್ಷಿತ ನಗರವಾಗಬೇಕು

ನಗರದಲ್ಲಿ ಮೊದಲ ಬಾರಿ ಕಮಾಂಡ್ ಸೆಂಟರ್ ಸ್ಥಾಪನೆಯಾಗಿದ್ದು ಇದರ ಅವಶ್ಯಕತೆ ಇರುವವರಿಗೆ ಇದರ ಪ್ರಯೋಜನ ದೊರಕಲಿ ಎಂದರು. ಅತ್ಯಾಧುನಿಕ ಉಪಕರಣಗಳನ್ನು ಕೇಂದ್ರದಲ್ಲಿ ಅಳವಡಿಸಲಾಗಿದ್ದು ಇವೆಲ್ಲವೂ ಉಪಯೋಗವಾಗಬೇಕು . ಹಾಗಾದಾರೆ ಕಮಾಂಡ್ ಸೆಂಟರ್ ನಿಂದ ಬೆಂಗಳೂರು ನಿಜವಾಗಿಯೂ ಸುರಕ್ಷಿತ ನಗರವೆನಿಸುತ್ತದೆ. ಪೋಲಿಸಿನವರಿಗೂ ಉತ್ತಮ ಹೆಸರು ಬರಲಿದೆ ಎಂದರು.

Key words: Inauguration – Bangalore- Safe- City -Command -Center- CM Siddaramaiah

ENGLISH SUMMARY…

CM Inaugurates Bengaluru Safe City Command Centre

Command center to curb Crime against women: CM Siddaramaiah

Bengaluru, November 24: Chief Minister Siddaramaiah said that chain snatching, atrocities on women and murders are on a rise in Bengaluru. Bengaluru Safe City Command Centre has been built under the Nirbhaya Fund to control such illegal activities and this should be properly utilized, he advised police.
He was speaking after inaugurating the Safe City Command Centre, set up at Bengaluru city police Commissioner’s office here today.
The CM said that it will be meaningful when these facilities reach people. The Command Centre has been built at a cost of Rs 668 crore. The outcome should be on expected lines, the CM opined. He said that the Police must keep an eye on Single houses and also on houses where single women live. He also directed the police to pay attention to ease the traffic and control the atrocities on women in their respective jurisdiction.

Make sure that crimes don’t occur

The CM said that after the crime has occurred it is one thing to nab the culprit and ensure punishment. But one has to control the crime from happening. He gave the example of the murder of the senior Geologist from the Mines and Geology department and directed the police to control crimes. He said that the police must protect women and keep tight vigilance in their jurisdiction.

Bengaluru should be a safe city

For the first time, a command centre has been established in Bengaluru. This must be utilized for those who are in need of it. There are modern equipment installed at the command centre and they must all be used properly utilized.. When the new system is utilized appropriately, Bengaluru will become a safe city and police will also get a good name, the CM opined.