ತುಮಕೂರು,ಫೆಬ್ರವರಿ,6,2023(www.justkannada.in): ಕರ್ನಾಟದ ಅಭಿವಥದ್ದಿ ಡಬಲ್ ಇಂಜಿನ್ ಸರ್ಕಾರದಿಂದ ಯೋಜನೆ ರೂಪಿಸಲಾಗಿದೆ. ಸರ್ವಪ್ರಿಯ ಬಜೆಟ್, ಸರ್ವಸ್ಪರ್ಶಿ ಬಜೆಟ್ ಮಂಡಿಸಲಾಗಿದ್ದು, ಅದಿವಾಸಿ,ಮಧ್ಯಮ ವರ್ಗ, ಮಹಿಳೆಯರು, ಯುವಕರು ಹಿರಿಯರು ಎಲ್ಲಾ ವರ್ಗದವರಿಗೆ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಕೇಂದ್ರ ಬಜೆಟ್ ಅನ್ನ ಸಮರ್ಥಸಿಕೊಂಡರು.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಬಳಿ ನಿರ್ಮಿಸಲಾದ ಹೆಚ್ ಎಎಲ್ ನ ಬೃಹತ್ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಪ್ರಧಾನಿ ಮೋದಿ, ತುಮಕೂರು ದೇಶದ ಅತಿದೊಡ್ಡ ಔದ್ಯೋಗಿಕ ಜಿಲ್ಲೆಯಾಗಿ ಬೆಳೆದಿದೆ. ಕಳೆದ 8 ವರ್ಷಗಳಲ್ಲಿ ನಾವು ಸರ್ಕಾರಿ ಫ್ಯಾಕ್ಟರಿಗಳ ಸುಧಾರಣೆ ಮಾಡಿದ್ದೇವೆ ಹೆಚ್ ಎಎಲ್ ನಲ್ಲಿ ಬಲ ಹೆಚ್ಚುತ್ತಿದೆ. ಈಗ ಎಚ್ ಎಎಲ್ ಭಾರತೀಯ ಸೇನೆಗೆ ತೇಜಸ್ ನಿರ್ಮಿಸುತ್ತಿದೆ ಎಂದರು.
ಕುಡಿಯುವ ನೀರಿನ ನೆಟ್ ವರ್ಕ್ ವಿಸ್ತಾರವಾಗುತ್ತಿದೆ ಪ್ರತಿ ಮನೆಗೆ ನೀರು ಹೋದರೇ ಪ್ರತಿ ಬಡಮಹಿಳೆಯರು ಮಕ್ಕಳಿಗೆ ಲಾಭವಾಗುತ್ತದೆ. 3 ಕೋಟಿ ಕುಟುಂಬಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಭದ್ರ ಮೇಲ್ದಂಡೆ ಯೊಜನೆಗೆ 5300 ಕೋಟಿ ಅನುದಾನ ನೀಡಿದ್ದೇವೆ. ಪ್ರತಿಮನೆಗೆ ನೀರು ಪ್ರತಿ ಜಮೀನುಗೂ ನೀರಾವರಿ ಕಲ್ಪಿಸುತ್ತೇವೆ. ಎಲ್ಲಾ ಕ್ಷೇತ್ರಗಳ ಅಭಿವೃದ್ದಿಗೆ ನಾವು ಹೆಚ್ಚು ಒತ್ತು ನೀಡಿದ್ದೇವೆ ಎಂದರು.
ಕೇಂದ್ರ ಬಜೆಟ್ ಸ್ವಯಂ ಪೂರ್ಣ ಭಾರತ, ಶಕ್ತಿಮಾನ್ ಭಾರತ, ಸಮರ್ಥ ಭಾರತ, ಸಂಪನ್ನ ಭಾರತ ಗತಿಮಾನ್ ದಿಶೆಯಲ್ಲಿ ಅತಿದೊಡ್ಡ ಹೆಜ್ಜೆಯಾಗಿದೆ. ಸಶಕ್ತ ಭಾರತ ಗುರಿಯನ್ನ ಮತ್ತಷ್ಟು ಬಲ ಪಡಿಸಬೇಕು. ಇದು ಸರ್ವಪ್ರಿಯ ಬಜೆಟ್, ಸರ್ವಸ್ಪರ್ಶಿ ಬಜೆಟ್. ಸಮೃದ್ಧ ಭಾರತಕ್ಕೆ ಈ ಬಜೆಟ್ ಶಕ್ತಿಯಾಗಿದೆ. ಕರ್ನಾಟಕದ ಪ್ರತಿಯೊಬ್ಬರಿಗೂ ಇದರ ಅನುಕೂಲ ಆಗುತ್ತೆ. ಎಲ್ಲರನ್ನೂ ತಲುಪುವ ಬಜೆಟ್. ಅವಶ್ಯಕತೆ ಆದಾಯ ನೋಡಿ ಬಜೆಟ್ ಮಂಡನೆ ಮಾಡಲಾಗಿದೆ ಇಷ್ಟು ವರ್ಷ ಪ್ರತಿವರ್ಗಕ್ಕೂ ಸರ್ಕಾರಿ ಸೇವೆ ತಲುಪಿಸಿದ್ದೇವೆ. ಬಜೆಟ್ ನಾರಿ ಶಕ್ತಿ ಹೆಚ್ಚಿಸುಯವ ಬಜೆಟ್ ಕೃಷಿ ಆಧುನಿಕತೆಯ ಬಜೆಟ್ ಆಗಿದೆ.
ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಇಡೀ ವಿಶ್ವದಲ್ಲೀ ಚರ್ಚೆಯಾಗುತ್ತಿದೆ . ಈ ಬಾರಿಯ ಬಜೆಟ್ ದೇಶಕ್ಕೆ ಅತಿಹೆಚ್ಚು ಶಕ್ತಿ ನೀಡಲಿದೆ. ಎಲ್ಲರನ್ನೂ ಒಳಗೊಂಡ ಸರ್ವವ್ಯಾಪಿ ಬಜೆಟ್ ಮಂಡಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
Key words: Inauguration – HAL- helicopter -manufacturing unit- PM Modi