ಮಂಡ್ಯ,ಮಾರ್ಚ್,9,2023(www.justkannada.in): ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಭೇಟಿ ಹಿನ್ನೆಲೆ ಭದ್ರತೆಗಾಗಿ 2400 ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಎಸ್ಪಿ ಯತೀಶ್, ಪ್ರಧಾನಿ ಮೋದಿ ಅವರಿಂದ ಮಾರ್ಚ್ 12 ರಂದು ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟನೆ ಹಿನ್ನೆಲೆ ಮಂಡ್ಯದಿಂದ ಗೆಜ್ಜಲಗರೆ ಸಮಾವೇಶದವರೆಗೂ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಮೈಸೂರು, ಚಾಮರಾಜನಗರ,ಕೊಡಗು ಹಾಸನ ಪೊಲೀಸರನ್ನ ನಿಯೋಜಿಸಲಾಗಿದೆ.
ಮಂಡ್ಯದ ಐಬಿ ಸರ್ಕಲ್ ನಿಂದ ನಂದ ಟಾಕೀಸ್ ವರೆಗೆ ರೋಡ್ ಶೋ ನಡೆಯಲಿದ್ದು ಅಮರಾವತಿ ಹೋಟೆಲ್ ಬಳಿ ಪ್ರಧಾನಿ ಮೋದಿ ರಸ್ತೆ ವೀಕ್ಷಣೆ ಮಾಡಲಿದ್ದಾರೆ. ಅಧಿಕೃತ ಟಿಪಿ ಬರುವವರೆಗೂ ಏನು ಹೇಳಲು ಆಗಲ್ಲ ಎಂದು ಎಸ್ಪಿ ಯತೀಶ್ ತಿಳಿಸಿದರು.
Key words: Inauguration – High way –PM Modi – March 12-Police security