ಬೆಂಗಳೂರು,ಜುಲೈ,31,2023(www,justkannada.in): ಅಕ್ಟೋಬರ್ 15 ರಂದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ. ದಸರಾ ಉದ್ಘಾಟಕರ ಬಗ್ಗೆ ಮುಂದೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಇಂದು ಮೈಸೂರು ದಸರಾ ಆಚರಣೆ ಕುರಿತು ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಸಚಿವ ಭೈರತಿ ಸುರೇಶ್ ಮೈಸೂರು ಭಾಗದ ಶಾಸಕರು ಪಾಲ್ಗೊಂಡಿದ್ದರು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಅ.15ರಂದು ಬೆಳಿಗ್ಗೆ 10 15ರಿಂದ 10 .30ರೊಳಗೆ ಶುಭಲಗ್ನದಲ್ಲಿ ಮೈಸೂರು ದಸರಾ ಉದ್ಘಾಟನೆಯಾಗಲಿದೆ. ದಸರಾ ಉದ್ಘಾಟಕರ ಆಯ್ಕೆ ಹೊಣೆ ನನಗೆ ನೀಡಿದ್ದಾರೆ. ಮುಂದೆ ಚರ್ಚಿಸಿ ಯಾರು ಉದ್ಘಾಟನೆ ಮಾಡಬೇಕು ಎಂದು ತೀರ್ಮಾನಿಸುತ್ತೇವೆ. ದಸರಾ ಪೂರ್ವಭಾವಿಸಭೆಯಲ್ಲಿ ಒಬ್ಬರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಪ್ರಸಕ್ತ ವರ್ಷ 5 ಗ್ಯಾರಂಟಿಗಳ ಬಗ್ಗೆ ತಿಳುಸುವ ಸ್ತಬ್ಧಚಿತ್ರ ಪ್ರದರ್ಶನವಿರುತ್ತದೆ. ರಾಜ್ಯದ ಪರಂಪರೆ ಜಿಲ್ಲೆಗಳ ವಿಶೇಷತೆ 5ಗ್ಯಾರಂಟಿ ಕುರಿತಾದ ಸ್ತಬ್ದಚಿತ್ರಗಳಿರುತ್ತವೆ . ಈ ಬಾರ ಏರ್ ಶೋ ಆಯೋಜನೆಗೆ ಚಿಂತನೆ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
Key words: Inauguration – Mysore dasara-october 15th: CM Siddaramaiah