ನಾಳೆ ಮೈಸೂರು ದಸರಾ ಉದ್ಘಾಟನೆ: ಚಾಮುಂಡಿಬೆಟ್ಟಕ್ಕೆ ಭಕ್ತರು, ಪ್ರವಾಸಿಗರಿಗೆ ನಿರ್ಬಂಧ.

ಮೈಸೂರು,ಅಕ್ಟೋಬರ್,6,2021(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಾಳೆ ಉದ್ಘಾಟನೆಯಾಗಲಿದ್ದು ಈ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಭಕ್ತರು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ನಾಳೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾ ಉದ್ಘಾಟಿಸಲಿದ್ದು ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ.

ಈ ಹಿನ್ನೆಲೆಯಲ್ಲಿ  ನಾಳೆ ಭಕ್ತರು, ಪ್ರವಾಸಿಗರಿಗೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ ವಿಧಿಸಿ  ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ತಾವರೆಕಟ್ಟೆ ಗೇಟ್ ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು,  ಚಾಮುಂಡಿಬೆಟ್ಟದ ನಿವಾಸಿಗಳು, ಉದ್ಘಾಟನಾ ಕಾರ್ಯಕ್ರಮದ ತಯಾರಿ ಕೆಲಸದ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತಿದೆ.  ಕೆ.ಆರ್ ಠಾಣಾ ಪೊಲೀಸರು ಸಾರ್ವಜನಿಕರ ವಾಹನ ತಪಾಸಣೆ ನಡೆಸುತ್ತಿದ್ದಾರೆ.

Key words: inauguration – Mysore Dasara-tomorrow-Restrictions – Chamundi hills

ENGLISH SUMMARY…

Inauguration of Mysuru Dasara tomorrow: Entry of devotees, tourists to Chamundi hills restricted
Mysuru, October 6, 2021 (www.justkannada.in): The world-famous Mysuru Dasara Mahotsav will be inaugurated tomorrow officially. Entry of devotees and tourists to the Chamundi hills has been restricted.
Former Chief Minister and BJP leader S.M. Krishna will inaugurate the celebrations formally tomorrow atop the Chamundi hills. Chief Minister Basavaraj Bommai, Mysuru District In-charge Minister S.T. Somashekar, and other leaders and dignitaries will be present.
Keywords: Mysuru Dasara/ inauguration/ tomorrow/ S.M. Krishna