ಮೈಸೂರು,ಮೇ,12,2022(www.justkannada.in): ವಿಶ್ವವಿದ್ಯಾನಿಲಯ ಇಂಜಿನಿಯರಿಂಗ್ ಕಾಲೇಜು ಹಾಗೂ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ ಮೇ 14ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ನೆರವೇರಿಸಲಿದ್ದಾರೆ.
ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ತಂತ್ರಜ್ಞಾನ ಭವನದ ಕಟ್ಟಡ, ಕೋರ್ಸ್ ಗಳು ಹಾಗೂ ಹಾಸ್ಟೆಲ್ ಹಾಗೂ ವಿಶ್ವವಿದ್ಯಾನಿಲಯದ ಫಾರ್ಮಸಿ ಕಾಲೇಜು ಕಟ್ಟಡಗಳ ಉದ್ಘಾಟನೆ ನಡೆಯಲಿದೆ. ಅಲ್ಲದೆ, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸುವರ್ಣ ಮಹೋತ್ಸವ ಕಟ್ಟಡ, ಭೂಗೋಳಶಾಸ್ತ್ರ ಮತ್ತು ಭೂ ವಿಜ್ಞಾನ ವಿಭಾಗಗಳ ವಿಸ್ತರಿಸಿದ ಮೊದಲನೇ ಮಹಡಿ ಕಟ್ಟಡ, ಗಣಕ ವಿಜ್ಞಾನ ಅಧ್ಯಯನ ವಿಭಾಗದ ಸಭಾಂಗಣವೂ ಲೋಕರ್ಪಣೆಗೊಳ್ಳಲಿದೆ. unive
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕ ಎಲ್. ನಾಗೇಂದ್ರ, ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಸೇರಿದಂತೆ ಸಿಂಡಿಕೇಟ್, ಶೈಕ್ಷಣಿಕ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕುಲಸಚಿವ ಪ್ರೊ.ಆರ್.ಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Inauguration-Mysore university- Engineering College -Buildings – 14th May.
ENGLISH SUMMARY…
UoM Engineering College and buildings inauguration on May 14
Mysuru, May 12, 2022 (www.justkannada.in): The inaugural function of the Engineering College of the University of Mysore and buildings will be held at 3.00 pm on May 14. Higher Education Minister Dr. C.N. Ashwathnarayana will inaugurate.
Inauguration of the School of Engineering College Technical Bhavan, Courses and Hostel buildings and the University’s Pharmacy College buildings will be performed. Apart from this the Communication and Journalism Department Golden Jubilee Hall building, Archeaology and Geological Science Department’s extended first floor, Computer Science Research Division’s auditorium will also be inaugurated on the same occasion.
District In-charge Minister S.T. Somashekar, MP Pratap Simha, MLA L. Nagendra, UoM VC Prof. G. Hemanth Kumar and Syndicate, Educational Board members will participate.
Keywords: University of Mysore/ Engineering College/ inauguration/ buildings