ಮೈಸೂರು, ಡಿಸೆಂಬರ್,7,2020(www.justkannada.in): ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ರಾಜ್ಯ ಬುಡಕಟ್ಟು ಸೋಶೋಧನಾ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ ರಾಜ್ಗೋಂಡ್ ಬುಡಕಟ್ಟು ಸಮುದಾಯದ ಗಿಡಮೂಲಿಕೆ ಔಷಧಿ ಪದ್ಧತಿ ಕುರಿತು ಸಂಶೋಧನಾ ಅಧ್ಯಯನದ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ದೊರೆಯಿತು.
ಕುವೆಂಪುನಗರದ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಆವರಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಮೈಸೂರು ವಿವಿ ಮಾನವಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಪ್ರೊ. ಎಂ. ಆರ್. ಗಂಗಾಧರ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ದೀಪ ಬೆಳಗಿಸುವ ಮೂಲಕ ಕಾರ್ಯಾಗಾರಕ್ಕೆ ಗಣ್ಯರಿಂದ ಚಾಲನೆ ದೊರೆಯಿತು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ರಾಜಗೊಂಡ್ ಬುಡಕಟ್ಟು ಜನಾಂಗದ ವೈದ್ಯ ಪರಿಣಿತರಿಂದ ಪಾರಂಪರಿಕ ಗಿಡಮೂಲಿಕೆಗಳ ಮಹತ್ವ, ವೈದ್ಯ ಪದ್ಧತಿ ಹಾಗೂ ಔಷಧಿ ಜ್ಞಾನ ಪದ್ದತಿ ಕುರಿತಾಗಿ ಮಾಹಿತಿ ನೀಡಲಾಗುತ್ತದೆ.
Key words: Inauguration – research study -herbal medicine – Rajgond tribal- community-mysore