ಮೈಸೂರು,ಅಕ್ಟೋಬರ್,7,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ.
ನಗರದ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡಿ ದೇವಿಗೆ ಅಗ್ರ ಪೂಜೆ ಮೂಲಕ ಮಾಜಿ ಸಿಎಂ ಎಸ್.ಎಂ ಕೃಷ್ಣ ದಸರಾ ಉದ್ಘಾಟಿಸಿದರು. 411ನೇ ದಸರಾಗೆ ಚಾಲನೆ ನೀಡಿದ ಎಸ್‌ಎಂ ಕೃಷ್ಣ, ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಬಳಿಕ ಉದ್ಘಾಟನಾ ಭಾಷಣ ಮಾಡಿದ ಎಸ್.ಎಂ ಕೃಷ್ಣ ಅವರು, ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ಮೈಸೂರು ದಸರಾ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿದೆ. ಮುಖ್ಯಮಂತ್ರಿಗಳು, ಹಾಗೂ ಅವರ ತಂದೆ ಅವರ ಜೊತೆ ಕೆಲಸ ಮಾಡಿದ ಸೌಭಾಗ್ಯ ನನ್ನದಾಗಿದೆ. ನನ್ನನ್ನ ಅತ್ಯಂತ ಗೌರವಯುತವಾಗಿ ಈ ಕ್ಷಣವನ್ನ ನನ್ನದಾಗಿಸಿದ್ದೀರಿ. ನಿಮಗೆ ನನ್ನ ಅನಂತ ಧನ್ಯವಾದಗಳು ಎಂದು ನುಡಿದರು.
ಯದುವಂಶದವರು ದಸರಾ ಉತ್ಸವಕ್ಕೆ ಮೆರಗು ತಂದಿದ್ದಾರೆ.
ಹತ್ತರೆಡು ವರ್ಷ ಇದ್ದಾಗಲೇ ನಮ್ಮ ತಂದೆ ಓದಲು ಕಳುಹಿಸಿಕೊಟ್ಟರು. ಒಂಟಿಕೊಪ್ಪಲು ಶಾಲೆಯಲ್ಲಿ ಓದಿ, ಮಹಜನ ಶಾಲೆ. ಯುವರಾಜ ಕಾಲೇಜು, ಮಹರಾಜ ಕಾಲೇಜಿನಲ್ಲಿ ಕಲಿತೆ. ನಾನು ಮೈಸೂರಿನ ಜೊತೆಯಲ್ಲೇ ಬೆಳೆದೆ. ಪ್ರತಿದಿನ ಚಾಮುಂಡಿ ಬೆಟ್ಟ ನೋಡುತ್ತಿದ್ದೆ, ಕೈ ಮುಗಿಯುತ್ತಿದೆ. ದಸರಾ ಆ ವೇಳೆ ಸಂಭ್ರಮದಿಂದ ನಡೆಯುತ್ತಿತ್ತು. ರಾಜ್ಯದ ನಾನಾ ಕಡೆ ಹಾಗೂ ವಿದೇಶದಿಂದ ಬರುತ್ತಿದ್ದರು. ಪ್ರಜಾಪ್ರತಿನಿಧಿ ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿತ್ತು. ಪೀಟಿಲ್ ಚೌಡಯ್ಯ, ದೇವೇಂದ್ರಪ್ಪ ಹಲವರು ಪ್ರಾಥಸ್ಮರಣಿಯರು ಇದ್ದರು. ಮೈಸೂರು ಕುಸ್ತಿಗೆ ಹೆಸರಾಂತ ಜಿಲ್ಲೆ. ಸಾಹುಕಾರ್ ಚನ್ನಯ್ಯ ಅವರು ಕುಸ್ತಿಗೆ ಸಹಮತ ಹೆಚ್ಚಾಗಿತ್ತು. ಯದುವಂಶದವರು ದಸರಾ ಉತ್ಸವಕ್ಕೆ ಮೆರಗು ತಂದಿದ್ದಾರೆ. ನಾಲ್ವಡಿ ಒಡೆಯರ್, ಜಯಚಾಮರಾಜ ಒಡೆಯರ್ ಕೊಡುಗೆ ಅಪಾರ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆ ಇದೆ ಎಂದು ಬಾಲ್ಯದ ದಿನ ಸೇರಿದಂತೆ ಮೈಸೂರಿನ ಪ್ರಮುಖರನ್ನ ನೆನೆದರು.
ವಿದ್ಯಾರ್ಥಿಯಾಗಿದ್ದಾಗ ನಾನು ದಸರಾ ನೋಡುತ್ತಿದ್ದೆ. ಮಂಡ್ಯ ಬಹಳ ಕಾಲ ಮೈಸೂರಿನ ಒಂದು ತಾಲೂಕಾಗಿತ್ತು. ಆ ಬಳಿಕ ಮಂಡ್ಯ ಒಂದು ಪ್ರತ್ಯೇಕ ಜಿಲ್ಲೆಯಾಯ್ತು ಎಂದು ಎಸ್.ಎಂ ಕೃಷ್ಣ ತಿಳಿಸಿದರು.
ಪ್ರಧಾನಿ ಮೋದಿ ಆಡಳಿತಕ್ಕೆ ಶ್ಲಾಘನೆ
ಇದೇ ವೇಳೆ ಪ್ರಧಾನಿ ಮೋದಿ ಆಡಳಿತ ಶ್ಲಾಘಿಸಿದ ಮಾಜಿ ಸಿಎಂ ಎಸ್.ಎಂ ಕೃಷ್ಣ, ಪ್ರಧಾನಿ ನರೇಂದ್ರ ಮೋದಿ ಬಹಳ ಶ್ರದ್ಧೆಯಿಂದ ಅಚ್ಚುಕಟ್ಟಾಗಿ ದೇಶ ಕಟ್ಟುತ್ತಿದ್ದಾರೆ. ಮೋದಿ ಬಹಳ ಒಳ್ಳೆಯ ಕೆಲಸ ಮಾಡಿ ದೇಶ ಕಟ್ಟುತ್ತಿದ್ದಾರೆ. ನಾನು ಬಹಳಷ್ಟು ಜನಪ್ರತಿನಿಧಿಗಳ ಆಡಳಿತ ನೋಡಿದ್ದೇನೆ. ಮೋದಿ , ಅಚ್ಚುಕಟ್ಟಾಗಿ ದೇಶ ಕಟ್ಟುತ್ತಿದ್ದಾರೆ. ತಾಯಿ ಚಾಮುಂಡಿ ಮೋದಿ ಅವರಿಗೆ ಇನ್ನಷ್ಟು ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.
Key words: inauguration – world famous -Mysore Dasara—former CM-SM krishna.
ENGLISH SUMMARY….
Mysuru Dasara inaugurated: Former CM S.M. Krishna recalls the contributions of major leaders to Mysuru
Mysuru, October 7, 2021 (www.justkannada.in): Former Chief Minister S.M. Krishna today inaugurated the world-famous Mysuru Dasara Mahotsav, by offering ‘Agra Puja,’ to the Goddess Chamundeshwari, atop the Chamundi Hills in Mysuru.
The 411th Dasara Mahotsav commenced with the offering of flowers by veteran politician S.M. Krishna.
In his address, the former Chief Minister expressed his heartfelt gratitude for giving him the opportunity to inaugurate the celebrations. “I am overwhelmed to inaugurate the Dasara Mahotsav. I personally feel this as one of the most memorable moments in my life. I also had the opportunity of working earlier with the present Chief Minister Basavaraj Bommai and also his father. I thank a lot to all those who have given this opportunity,” he said.
On the occasion, he recalled his student days, the Ontikoppal school, Mahajana School, Yuvaraja College, and Maharaja College where he studied. “I also grew in Mysuru. I daily used to see the Chamundi hills and used to fold my hands with devotion from wherever I was. In the older days, Dasara was a delight to watch. So many foreign dignitaries and guests used to come to Mysuru. The guests were honoured at the Jaganmohan Palace. There were several programs from music stalwarts like Pitilu Chowdaiah, Devendrappa and others,” he said and also recalled the contribution of stalwarts like Sir M. Visveswaraiah and Sir Mirza Ismail.
He also appreciated Prime Minister Narendra Modi’s administration. “Prime Minister Modi is doing very good work. He is building the nation and is taking the country in the right way forward. I have seen the administration of several great leaders. But PM Modi is exceptional. I pray the goddess Chamundeshwari to bless him and give him all the required strength to make our country stronger,” he added.
Keywords: Mysuru Dasara/ inauguration/ former CM S.M. Krishna