ಮೈಸೂರು,ಮೇ,5,2021(www.justkannada.in): ಚಾಮರಾಜನಗರದ ಘಟನೆಯಿಂದ ನಮ್ಮ ಕಣ್ಣು ತೆರೆದಿದೆ. ಈ ಘಟನೆಯಿಂದ ಏನೇನು ಬೇಕು ಎಂಬುದನ್ನ ತಿಳಿದಿದ್ದೇವೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದರು.
ಚಾಮರಾಜನಗರ ಆಕ್ಸಿಜನ್ ದುರಂತ ಕುರಿತು ಮೈಸೂರಿನಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಈ ಇಡೀ ಘಟನೆ ಬಗ್ಗೆ ಮೈಸೂರಿನ ಮೇಲೆ ಆರೋಪ ಬಂದಿದೆ. ಈ ಆರೋಪ ಬಾರದಿರುವ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋವಿಡ್ ಸಂಬಂಧ ಫೆಬ್ರವರಿಯಲ್ಲೇ ಸರ್ಕಾರದ ಮೇಲೆ ಒತ್ತಡ ಹಾಕಿದ್ದೆ. ಈ ಬಗ್ಗೆ ಸಾಕಷ್ಟು ಪತ್ರ ವ್ಯವಹಾರ ನಡೆಸಿದ್ದೆ. ಹಾಗಾಗಿ ನಾನು ನನ್ನ ಕ್ಷೇತ್ರದಲ್ಲಿ ಒಂದು ಆಸ್ಪತ್ರೆಯನ್ನ ಸಿದ್ದ ಮಾಡಿದ್ದೇವೆ. ಮೈಸೂರಿಗೆ ಬೇಕಾದ ಎಲ್ಲಾ ಅವಶ್ಯಕತೆಯನ್ನ ಕೇಳಿದ್ದೇವೆ ಎಂದರು.
ಚಾಮರಾಜನಗರದಲ್ಲಿ ಆಗಿರೋದು ಅಲ್ಲಿನ ಜಿಲ್ಲಾಡಳಿತದ ವೈಫಲ್ಯ- ಶಾಸಕ ಯತೀಂದ್ರ ಸಿದ್ಧರಾಮಯ್ಯ..
ಹಾಗೆಯೇ ಘಟನೆ ಕುರಿತು ಮಾತನಾಡಿರುವ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಚಾಮರಾಜನಗರದಲ್ಲಿ ಆಗಿರೋದು ಅಲ್ಲಿನ ಜಿಲ್ಲಾಡಳಿತದ ವೈಫಲ್ಯ. ಅದನ್ನ ತಡೆಗಟ್ಟಬಹುದಿತ್ತು. ಆದರೆ ಆ ಕೆಲಸ ಅವರು ಮಾಡಿಲ್ಲ. ಮೈಸೂರಿನ ಬಗ್ಗೆ ಅಪಾದನೆ ಮಾಡಿದ್ದಾರೆ. ಅದರ ಬಗ್ಗೆಯು ನಾವು ಪ್ರಶ್ನೆ ಕೇಳಿದ್ದೇವೆ ಎಂದರು.
ಮೈಸೂರಲ್ಲಿ ರೆಮಿಡಿಸಿವರ್, ಬೆಡ್ ಆಕ್ಸಿಜನ್ ಬಗ್ಗೆ ಚರ್ಚೆ ಮಾಡಿದ್ದೇವೆ. ಆ ಬಗ್ಗೆಯು ಸಚಿವರ ಜೊತೆ ಚರ್ಚೆ ಮಾಡಿದ್ದೇವೆ. ಇದೆಲ್ಲದಕ್ಕೂ ಕ್ರಮ ಕೈಗೊಂಡಿದ್ದೇವೆ ಅಂತ ಸಚಿವರು ಹೇಳಿದ್ದಾರೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
Key words: incident – Chamarajanagar –hospital-oxigen-death– MLA -Tanveer Seth.