ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ ಮಂಡನೆ

ನವದೆಹಲಿ, ಫೆಬ್ರುವರಿ 13,2025 (www.justkannada.in):  ಇಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡನೆ ಮಾಡಿದ್ದಾರೆ.

ಆರಂಭದಲ್ಲಿ ಮಸೂದೆ ಮಂಡನೆಗೆ ವಿರೋಧ ಪಕ್ಷಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಬಳಿಕ ಧ್ವನಿಮತದ ಮೂಲಕ ಮಸೂದೆ ಮಂಡನೆಗೆ ಒಪ್ಪಿಗೆ ಲಭಿಸಿತು.  622 ಪುಟಗಳಿರುವ  ಆದಾಯ ತೆರಿಗೆ ಮಸೂದೆ 2025 ಅನ್ನು ಈ ಬಾರಿಯ ಬಜೆಟ್​ ನಲ್ಲಿ ಘೋಷಿಸಲಾಗಿತ್ತು. ಫೆಬ್ರುವರಿ 7ರಂದು ಕೇಂದ್ರ ಸಂಪುಟ ಅನುಮೋದನೆ ಕೂಡ ಮಾಡಿತ್ತು.

ಲೋಕಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಇದಾದ ಬಳಿಕ ಸಂಸತ್ ​ನ ಹಣಕಾಸು ಸ್ಥಾಯಿ ಸಮಿತಿಯ ಅವಗಾಹನೆಗೆ ಈ ಮಸೂದೆಯನ್ನು ಕಳುಹಿಸಲಾಗುತ್ತದೆ.  ಸಂಸತ್ ​ನಿಂದ ಅಂತಿಮ ಒಪ್ಪಿಗೆ ಮುದ್ರೆ ದೊರೆತ ಬಳಿಕ ಅದು ಕಾಯ್ದೆಯಾಗಲಿದೆ.

Key words: Income Tax, Bill ,introduced, Lok Sabha