ನವ ದೆಹಲಿ, ಜೂನ್ ೮, ೨೦೨೧ (www.justkannada.in): ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಪಾವತಿಸುವ ಹೊಸ ಇ-ಫೈಲಿಂಗ್ ಪೋರ್ಟಲ್ ” www.incometax.gov.in ” ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಹೊಸ ಪೋರ್ಟಲ್ ತೆರಿಗೆ ಪಾವತಿಸುವವರಿಗೆ ಹೆಚ್ಚಿನ ಅನುಕೂಲದೊಂದಿಗೆ, ಆಧುನಿಕ, ತಡೆರಹಿತ ಅನುಭವವನ್ನು ಒದಗಿಸಲಿದೆ.
ಈ ಹೊಸ ಪೋರ್ಟಲ್‌ನ ಕೆಲವು ಮುಖ್ಯಾಂಶಗಳು ಈ ಕೆಳಕಂಡಂತಿವೆ..
• ತೆರಿಗೆ ಪಾವತಿಸುವವರಿಗೆ ಶೀಘ್ರವಾಗಿ ರೀಫಂಡ್ ಮಾಡಲು ಆದಾಯ ತೆರಿಗೆ ರಿಟರ್ನ್ (ಐಟಿಆರ್)ಗಳ ಅತ್ಯಂತ ಕ್ಷಿಪ್ರ ಸಂಸ್ಕರಣೆಯೊAದಿಗೆ ಹೊಸ ತೆರಿಗೆ ಪಾವತಿ-ಸ್ನೇಹಿ ಪೋರ್ಟಲ್;
• ತೆರಿಗೆ ಪಾವತಿಸುವವರಿಂದ ಫಾಲೊ-ಅಪ್‌ಗಾಗಿ ಒಂದೇ ಡ್ಯಾರ್ಶಬೋರ್ಡ್ನಲ್ಲಿ ಎಲ್ಲಾ ಪರಸ್ಪರ ಸಂಭಾಷಣೆಗಳು ಹಾಗೂ ಅಪ್‌ಲೋಡ್‌ಗಳು ಅಥವಾ ಉಳಿದಿರುವ ಕ್ರಮಗಳು ಡಿಸ್‌ಪ್ಲೇ ಆಗುತ್ತದೆ;
• ತೆರಿಗೆ ಪಾವತಿಸುವವರಿಗೆ ಐಟಿಆರ್ ೧, ೪ (ಆನ್‌ಲೈನ್ ಹಾಗೂ ಆಫ್‌ಲೈನ್) ಹಾಗೂ ಐಟಿಆರ್೨ (ಆಫ್‌ಲೈನ್)ಗೆ ಸಂಬಂಧಪಟ್ಟಂತೆ ನೆರವಾಗಲು ಪರಸ್ಪರ ಪ್ರಶ್ನೆ ಹಾಗೂ ಉತ್ತರಗಳ ಜೊತೆಗೆ ಉಚಿತ ಐಟಿಆರ್ ಸಿದ್ಧಪಡಿಸುವ ಸಾಫ್ಟ್ವೇರ್ ಪ್ರಸ್ತುತ ಲಭ್ಯ; ಮುಂದಿನ ದಿನಗಳಲ್ಲಿ ಐಟಿಆರ್ ೩, ೫, ೬, ೭ ಅನ್ನು ಸಿದ್ಧಪಡಿಸುವ ಸೌಲಭ್ಯವನ್ನೂ ಕಲ್ಪಿಸಲಾಗುವುದು;
• ವೇತನ, ಮನೆ, ವ್ಯಾಪಾರ/ವೃತ್ತಿ ಒಳಗೊಂಡAತೆ ಕೆಲವು ವಿವರಗಳನ್ನು ಒದಗಿಸಲು ತೆರಗಿ ಪಾವತಿದಾರರು ತಮ್ಮ ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡಬಹುದಾಗಿರುತ್ತದೆ. ಟಿಡಿಎಸ್ ಹಾಗೂ ಎಸ್‌ಎಫ್‌ಟಿ ಸ್ಟೇಟ್‌ಮೆಂಟ್‌ಗಳನ್ನು ಅಪ್‌ಲೋಡ್ ಮಾಡಿದ ನಂತರ ಕ್ಯಾಪಿಟಲ್ ಗೇನ್ಸ್ನೊಂದಿಗೆ ವೇತನ ಆದಾಯ, ಬಡ್ಡಿ, ಡಿವಿಡೆಂಡ್ ವಿವರಗಳನ್ನು ಪ್ರೀ-ಫ್ಲಿಲ್ಲಿಂಗ್ ಮಾಡುವ ಸೌಲಭ್ಯ (ಕೊನೆಯ ದಿನಾಂಕ ಜೂನ್ ೩೦, ೨೦೨೧);
• ತೆರಿಗೆ ಪಾವತಿಸುವವರು ಕೇಳುವ ಪ್ರಶ್ನೆಗಳು ಹಾಗೂ ಅನುಮಾನಗಳಿಗೆ ಪ್ರಾಮಾಣಿಕವಾದ ಉತ್ತರ/ಪ್ರತಿಕ್ರಿಯೆ ಒದಗಿಸಲು ಹೊಸ ತೆರಿಗೆಪಾವತಿ ಸಹಾಯಕ ಕಾಲ್ ಸೆಂಟರ್. ವಿವರವಾ ಎಫ್‌ಎಕ್ಯೂಗಳು, ಬಳಕೆ ಕೈಪಿಡಿಗಳು, ವೀಡಿಯೊಗಳು ಹಾಗೂ ಚಾಟ್‌ಬೊಟ್/ ಲೈವ್ ಏಜೆಂಟ್ ಸೌಲಭ್ಯಗಳನ್ನೂ ಒದಗಿಸಲಾಗುತ್ತಿದೆ;
• ಆದಾಯ ತೆರಿಗೆ ನಮೂನೆಗಳನ್ನು ಫೈಲ್ ಮಾಡಲು, ತೆರಿಗೆ ವೃತ್ತಿಪರರನ್ನು ಸೇರಿಸಲು, ಫೇಸ್‌ಲೆಸ್ ಸ್ಕೂçಟಿನಿ ಅಥವಾ ಅಪೀಲುಗಳಲ್ಲಿ ನೋಟಿಸ್‌ಗಳಿಗೆ ಪ್ರತಿಕ್ರಿಯೆ ಸಲ್ಲಿಸುವ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ.
ಈ ಹೊಸ ತೆರಿಗೆ ಪಾವತಿ ವ್ಯವಸ್ಥೆಯನ್ನು ಜೂನ್ ೧೮, ೨೦೨೧ರಿಂದ, ಅಂದರೆ ತೆರಿಗೆ ಪಾವತಿಸುವವರ ಅನುಕೂಲಕ್ಕಾಗಿ ಮುಂಗಡ ತೆರಿಗೆ ಕಂತು ಪಾವತಿಯ ನಂತರ ಬಿಡುಗಡೆ ಮಾಡಲಾಗುತ್ತದೆ. ಇದರ ಮೊಬೈಲ್ ಆ್ಯಪ್ ಅನ್ನು ಸಹ ಪೋರ್ಟಲ್ ಬಿಡುಗಡೆಯಾದ ನಂತರ ಶೀಘ್ರವೇ ಬಿಡುಗಡೆ ಮಾಡಲಾಗುವುದು.
key words : income-tax-filling-new-app-relesed-karnataka-bangalore