ರಾಮನಗರ, ಜೂನ್, 26, 2024 (www.justkannada.in): ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್, ನಂತರ ಹಾಲಿನ ದರವೂ ಹೆಚ್ಚಳವಾದ ಹಿನ್ನೆಲೆಯಲ್ಲಿ ಆಟೋ, ಟ್ಯಾಕ್ಸಿ ದರ ಹೆಚ್ಚಳಕ್ಕೆ ಸಂಘಟನೆಗಳು ಮನವಿ ಮಾಡಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಅವರು ಹೇಳಿದಂತೆ ದರ ಹೆಚ್ಚಿಸಲ್ಲ, ಆದರೆ ಈ ಬಗ್ಗೆ ಒಂದು ನಿರ್ಣಯ ಮಾಡುತ್ತಾರೆ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗರೆಡ್ಡಿ, ಸರ್ಕಾರಿ ನೌಕರರಿಗೆ ಸಂಬಳ ನೀಡಬೇಕೆಂದರೆ ತೆರಿಗೆ ಅನಿವಾರ್ಯ. ರಾಜ್ಯ ಸರ್ಕಾರ ಮೂರು ರೂ. ಹೆಚ್ಚಿಸಿದ್ದು ನಿಜ. ಏಕೆಂದರೆ ಸರ್ಕಾರಿ ಕೆಲಸಗಳು ನಡೆಯಬೇಕು. ಸರ್ಕಾರಿ ನೌಕರರಿಗೆ ವೇತನ ಕೊಡಬೇಕು ಅಂದರೆ ತೆರಿಗೆ ಅನಿವಾರ್ಯ. ಆದರೆ ಕೇಂದ್ರ ಸರ್ಕಾರದಂತೆ ತೈಲ, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸಿಲ್ಲ. ಕೇಂದ್ರ 400 ರೂ. ಗ್ಯಾಸ್ನ್ನು ಒಂದು ಸಾವಿರ ರೂ. ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
Key words: increase, auto, taxi fares, Minister, Ramalingareddy