ಬೆಂಗಳೂರು, ಅಕ್ಟೋಬರ್ 02, 2021 (www.justkannada.in): ಅಮೆರಿಕದಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವುಗಳ ಸಂಖ್ಯೆ ಶುಕ್ರವಾರ 7 ಲಕ್ಷದ ಗಡಿ ದಾಟಿದೆ.
ಕೊರೊನಾ ಡೆಲ್ಟಾ ತಳಿ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಆಡಳಿತಕ್ಕೆ ಸಮಾಧಾನ ಮೂಡಿಸಿದೆ.
ಕೊನೆಯ ಒಂದು ಲಕ್ಷ ಸಾವು ಮೂರುವರೆ ತಿಂಗಳಲ್ಲಿ ಸಂಭವಿಸಿವೆ. ಲಸಿಕೆ ಪಡೆಯದವರಲ್ಲಿ ಡೆಲ್ಟಾ ರೂಪಾಂತರ ಸೋಂಕು ತ್ವರಿತವಾಗಿ ವ್ಯಾಪಿಸಿದ್ದು, ಇದಕ್ಕೆ ಕಾರಣ ಎನ್ನಲಾಗಿದೆ. ಸಾವಿನ ಸಂಖ್ಯೆ ಬಾಸ್ಟನ್ ನಗರದ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ.
ಸಾವಿನ ಸಂಖ್ಯೆ 7 ಲಕ್ಷದ ಗಡಿ ದಾಟಿದ ಬೆಳವಣಿಗೆ ವೈದ್ಯಕೀಯ ಕ್ಷೇತ್ರದ ಪ್ರಮುಖರು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮುಖಂಡರಲ್ಲಿ ಬೇಸರ ಮೂಡಿಸಿದೆ. ಲಸಿಕೆ ಲಭ್ಯವಿದ್ದರೂ ಹೆಚ್ಚಿನವರು ಪಡೆದುಕೊಂಡಿಲ್ಲ ಎಂಬುದು ಇದಕ್ಕೆ ಕಾರಣ ಎನ್ನಲಾಗಿದೆ.
ಸೆಪ್ಟೆಂಬರ್ ಆರಂಭದಲ್ಲಿ ನಿತ್ಯ 93 ಸಾವಿರ ಪ್ರಕರಣ ದಾಖಲಾಗುತ್ತಿದ್ದರೆ, ಈಗ 75 ಸಾವಿರಕ್ಕೆ ಇಳಿದಿದೆ. ಈಗ ಸರಾಸರಿ 1,12,000 ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ಎರಡೂವರೆ ವಾರಗಳ ಸ್ಥಿತಿಗೆ ಹೋಲಿಸಿದರೆ ಮೂರನೇ ಒಂದರಷ್ಟಾಗಿದೆ.
key words: Increase in the number of deaths caused by covid in the US