ಮಂಡ್ಯ,ಜುಲೈ,8,2023(www.justkannada.in): ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್ಎಸ್ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. 13,449 ಕ್ಯೂಸೆಕ್ ನೀರು ಒಳಹರಿವು ಇದೆ.
ಈ ವರ್ಷದಲ್ಲಿ ಮೊದಲ ಬಾರಿಗೆ ಇಷ್ಟು ಪ್ರಮಾಣದ ಒಳ ಹರಿವು ಇದ್ದು, ಒಂದೇ ದಿನದಲ್ಲಿ 2 ಅಡಿ ನೀರು ಹರಿದು ಬಂದಿದೆ. ಮೂರು ದಿನಗಳಲ್ಲಿ 3 ಟಿಎಂಸಿ ನೀರು ಹೆಚ್ಚಾಗಿದೆ. ಡ್ಯಾಂ ನೀರಿನ ಮಟ್ಟ 82 ಅಡಿಗೆ ಏರಿಕೆಯಾಗಿದೆ. 353 ಕ್ಯೂಸೆಕ್ ಹೊರ ಹರಿವು ಇದ್ದು, ಡ್ಯಾಂನ ಗರಿಷ್ಠ ನೀರಿನ ಮಟ್ಟ 124.80 ಅಡಿಯಾಗಿದೆ.
Key words: Increase – inflow -rate – KRS Reservoir.