ರೈತರಿಗೆ ಲಾಭ ಸಿಗಲೆಂದು ಹಾಲಿನ ದರ ಏರಿಕೆ: ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ

ಬೆಂಗಳೂರು,ಜೂನ್,26,2024 (www.justkannada.in): ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೆ ಹಾಲಿನ ದರವನ್ನೂ ಸಹ ಹೆಚ್ಚಿಸಿರುವ ರಾಜ್ಯ ಸರ್ಕಾರದ ನಡೆಗೆ ವಿಪಕ್ಷಗಳು ಮತ್ತು ರಾಜ್ಯದ ಜನತೆ ಆಕ್ರೋಶ ವ್ಯಕ್ತಪಡಿಸಿದರೆ ಇತ್ತ ಸಿಎಂ, ಡಿಸಿಎಂ ಮತ್ತು ಸಚಿವರು ಹಾಲಿನ ದರ ಏರಿಕೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಕುರಿತು ಇಂದು ಮಾತನಾಡಿರುವ ಗ್ರಾಮೀಣಾಭಿವೃದ್ದಿ ಸಚಿವ  ಪ್ರಿಯಾಂಕ್ ಖರ್ಗೆ, ಹಾಲು ದರ ಏರಿಕೆಯಿಂದಾಗಿ ರೈತರಿಂದ ಹಾಲು ಖರೀದಿಗೆ ಅನುಕೂಲ ಆಗಲಿದೆ ರೈತರಿಗೆ ಲಾಭ ಸಿಗಲೆಂಬ ಉದ್ದೇಶದಿಂದ ಏರಿಕೆ ಮಾಡಲಾಗಿದೆ ಎಂದಿದ್ದಾರೆ.

ಇಂದಿನಿಂದ ಹಾಲಿನ ದರ ಏರಿಕೆ ಜಾರಿಗೆ ಬರಲಿದೆ. ಇಂದಿನ ದರ ಹೆಚ್ಚಳದ ಜತೆ ಕ್ವಾಂಟಿಟಿ ಕೂಡ ಹೆಚ್ಚಾಗಲಿದೆ ಎಂದು ಹಾಲಿನ ದರ ಏರಿಕೆಯನ್ನ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ  ಮಾಡಿಕೊಂಡಿದ್ದಾರೆ.

Key words: Increase, milk price, Minister, Priyank Kharge