ಬೆಂಗಳೂರು,ಡಿಸೆಂಬರ್,26,2024 (www.justkannada.in): ರಾಜ್ಯದ ಜನತೆಗೆ ಶೀಘ್ರದಲ್ಲೇ ಹಾಲಿನ ದರ ಏರಿಕೆಯ ಶಾಕ್ ತಟ್ಟಲಿದೆ. ಹೌದು, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹಾಲಿನ ದರ ಏರಿಕೆಯ ಸುಳಿವು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಭೀಮಾನಾಯ್ಕ್ ನಂದಿನಿ ಹಾಲಿನ ದರವನ್ನು 5 ರೂ ಹೆಚ್ಚಳ ಮಾಡಲು ಪ್ರಸ್ತಾವನೆ ಬಂದಿದೆ. ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ ಬಳಿಕ ಹಾಲಿನ ದರ ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ 50 ಎಂಎಲ್ ಹಾಲು ವಾಪಸ್ ಪಡೆಯಲಾಗುತ್ತದೆ. ಇದರ ಜೊತೆಗೆ 2 ರೂ ಕಡಿತ ಮಾಡಲಾಗಿದೆ. ಬೆಂಗಳೂರಿನಲ್ಲಿ ಇಡ್ಲಿ ದೋಸೆ ಹಿಟ್ಟು ನೀಡುತ್ತೇವೆ ಎಂದು ಭೀಮಾ ನಾಯ್ಕ್ ತಿಳಿಸಿದರು. ಈ ಹಿಂದೆ 2 ರೂ ಹಾಲಿನ ದರ ಹೆಚ್ಚಿಸಿ 50 ಎಂಎಲ್ ಹಾಲು ಹೆಚ್ಚಿಗೆ ಕೊಡಲಾಗುತ್ತಿತ್ತು. ಇನ್ನು ಸಂಕ್ರಾಂತಿ ಹಬ್ಬದ ಬಳಿಕ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.
Key words: soon, increase, milk, prices.