ಚಾಮರಾಜನಗರ,ಜುಲೈ,18,2022(www.justkannada.in): ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿದ್ದು ಈ ನಡುವೆ ಕಾವೇರಿ, ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಳವಾದ ಹಿನ್ನಲೆ ಮೆಟ್ಟೂರು ಡ್ಯಾಮ್ ಸಂಪೂರ್ಣ ಭರ್ತಿಯಾಗಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಮೆಟ್ಟೂರು ಡ್ಯಾಂ ಸತತ ನಾಲ್ಕನೆ ಬಾರಿ ತುಂಬಿದ್ದು, ಮೆಟ್ಟೂರು ಡ್ಯಾಂನಿಂದ ಸಾವಿರಾರು ಕ್ಯಾಸೆಕ್ಸ್ ನೀರು ನದಿ ಪಾತ್ರಕ್ಕೆ ಬಿಡುಗಡೆ ಮಾಡಲಾಗುತ್ತಿದೆ.
ಮೆಟ್ಟೂರು ಜಲಾಶಯಕ್ಕೆ 1ಲಕ್ಷದ 30 ಸಾವಿರ ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು, 1 ಲಕ್ಷದ 34 ಸಾವಿರ ಕ್ಯೂಸೆಕ್ಸ್ ಹೊರಹರಿವು ಇದೆ. ಡ್ಯಾಂ ಹಿತಾದೃಷ್ಟಿಯಿಂದ ಹೆಚ್ಚುವರಿ ನೀರನ್ನ ನದಿ ಪಾತ್ರದ ಪ್ರದೇಶಕ್ಕೆ ಬಿಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆ ಹೆಚ್ಚಿನ ನೀರು ಹರಿದು ಬರುತ್ತಿದ್ದು ಜಲಾಶಯಗಳು ಭರ್ತಿಯಾಗುತ್ತಿದೆ.
Key words: increase – outflow – Cauvery-Kabini Reservoir-Mettur dam – full