ನವದೆಹಲಿ,ಜು,25,2019(www.justkannada.in): ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡುವಂತೆ ಕೋರಿ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆಯಲು ಸಮ್ಮತಿ ನೀಡಿದ ಸುಪ್ರೀಂಕೋರ್ಟ್ ಈ ವೇಳೆ ವಕೀಲ ಮುಕುಲ್ ರೋಹ್ಟಗಿ ಅವರಿಗೆ ತರಾಟೆ ತೆಗೆದುಕೊಂಡಿದೆ.
ಸಿಎಂ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಸೋಮವಾರವೇ ವಿಶ್ವಾಸಮತಯಾಚನೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ ಇಬ್ಬರು ಪಕ್ಷೇತರ ಶಾಸಕರಾದ ಆರ್. ಶಂಕರ್ ಮತ್ತು ನಾಗೇಶ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇನ್ನು ಹೆಚ್.ಡಿ ಕುಮಾರಸ್ವಾಮಿ ಮಂಗಳವಾರ ವಿಶ್ವಾಸಮತಯಾಚನೆ ಮಾಡಿದ್ದು ಬಹುಮತ ಸಾಬೀತುಪಡಿಸಲು ವಿಫಲರಾದರು. ಈ ನಡುವೆ ಪಕ್ಷೇತರ ಶಾಸಕರು ಅರ್ಜಿ ಹಿಂಪಡೆಯಲು ತಕರಾರಿಲ್ಲವೆಂದು ಹೆಚ್.ಡಿ ಕುಮಾರಸ್ವಾಮಿ ಪರ ವಕೀಲ ರಾಜೀವ್ ಧವನ್ ಸುಪ್ರೀಂಕೋರ್ಟ್ ಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅರ್ಜಿ ಹಿಂಪಡೆಯಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ.
ಈ ಮಧ್ಯೆ ಅರ್ಜಿ ಹಿಂಪಡೆಯಲು ಬಾರದಿದ್ದಕ್ಕೆ ಪಕ್ಷೇತರ ಶಾಸಕರ ಪರ ವಕೀಲರಾದ ಮುಕುಲ್ ರೊಹ್ಟಗಿ ಅವರಿಗೆ ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡಿತು. ತುರ್ತು ವಿಚಾರಣೆ ಆಗಬೇಕಾದರೇ ಮಧ್ಯಾಹ್ನ ಮಧ್ಯರಾತ್ರಿ ನ್ಯಾಯಾಲಯಕ್ಕೆ ಬರುತ್ತಾರೆ. ಆದರೇ ಅರ್ಜಿ ವಾಪಸ್ ಪಡೆಯಲು ಮಾತ್ರ ಬರಲ್ಲ. ಕೋರ್ಟ್ ಗೆ ಬರಬಾರದೆಂದು ನಿರ್ಧರಿಸಿದಂತಿದೆ ಎಂದು ಮುಕುಲ್ ರೊಹ್ಟಗಿ ಅವರ ನಡೆ ವಿರುದ್ದ ಸುಪ್ರಿಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
Key words: independent mla- petition-return- Supreme Court – lawyer -Mukul Rohtagi.