ಭಾರತ-ಚೀನಾ ಘರ್ಷಣೆ: ಅರುಣಾಚಲ ಪ್ರದೇಶದ ಮೇಲೆ ಸಕ್ರಿಯ ಯುದ್ಧ ಗಸ್ತು

ಬೆಂಗಳೂರು, ಡಿಸೆಂಬರ್ 13, 2022 (www.justkannada.in): ಭಾರತೀಯ ವಾಯುಪಡೆ (ಐಎಎಫ್) ಅರುಣಾಚಲ ಪ್ರದೇಶದ ಮೇಲೆ ಸಕ್ರಿಯ ಯುದ್ಧ ಗಸ್ತು ಆರಂಭಿಸಿದೆ.

ಕಳೆದ ಕೆಲವು ದಿನಗಳ ಹಿಂದೆ ನಡೆದ ಭಾರತ-ಚೀನಾ ಘರ್ಷಣೆ ಬೆನ್ನಲ್ಲೇ, ಭಾರತೀಯ ವಾಯುಪಡೆ (ಐಎಎಫ್) ಅರುಣಾಚಲ ಪ್ರದೇಶದ ಮೇಲೆ ಸಕ್ರಿಯ ಯುದ್ಧ ಗಸ್ತು ಆರಂಭಿಸಿದೆ ಎಂದು ಮೂಲಗಳು ಇಂದು ತಿಳಿಸಿವೆ.

ಚೀನಾದಿಂದ ವಾಯುಪ್ರದೇಶದ ಉಲ್ಲಂಘನೆಯನ್ನು ತಡೆಯಲು ಈ ಗಸ್ತು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಕಳೆದ ವಾರ ಅರುಣಾಚಲ ಪ್ರದೇಶದ ಎಲ್‌ಎಸಿಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಘರ್ಷಣೆಗೆ ಒಳಗಾಗಿದ್ದರು ಎಂದು ನಿನ್ನೆ ಬಹಿರಂಗವಾಗಿತ್ತು.

ಈ ವೇಳೆ, ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.