ಭಾರತ –ಚೀನಾ ಯೋಧರ ನಡುವೆ ಮತ್ತೆ ಸಂಘರ್ಷ…

ಲಡಾಖ್,ಆಗಸ್ಟ್,31,2020(www.justkannada.in):   ಇತ್ತೀಚೆಗೆ ಭಾರತೀಯ ಸೇನೆ ಮತ್ತು ಚೀನಾ ಸೇನೆ ನಡುವೆ ಸಂಘರ್ಷ ಉಂಟಾಗಿ ಪರಿಸ್ಥಿತಿ ಉದ್ವಿಗ್ನವಾಗಿ ಬಳಿಕ ಮಾತುಕತೆ ಮೂಲಕ ತಣ್ಣಗಾಗಿತ್ತು. ಇದೀಗ ಮತ್ತೆ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ಏರ್ಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.jk-logo-justkannada-logo

ಲಡಾಖ್ ನ ವಾಸ್ತವ ಗಡಿನಿಯಂತ್ರಣ ರೇಖೆಯ ಸಮೀಪದ ಪ್ಯಾಂಗಾಂಗ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಮತ್ತೆ  ಸಂಘರ್ಷ ಉಂಟಾಗಿದೆ. ಆಗಸ್ಟ್ 29ರ  ರಾತ್ರಿ ಪ್ಯಾಂಗಾಂಗ್ ಪ್ರದೇಶದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದೆ ಎನ್ನಲಾಗಿದೆ.india-china-conflict-again

ರಾಜತಾಂತ್ರಿಕ ಮಾತುಕತೆಯ ನಡುವೆಯೂ ಚೀನಾ ಸೇನೆಯಿಂದ ಅತಿಕ್ರಮಣ ನಡೆದಿದೆ. ಭಾರತದ ಗಡಿಯಲ್ಲಿ ಚೀನಾ ಸೈನಿಕರು ನುಸುಳಲು ಯತ್ನಿಸಿದ್ದಾರೆ. ಈ ವೇಳೆ ಭಾರತ-ಚೀನಾ ಸೈನಿಕರ ನಡುವೆ ಮತ್ತೆ ಗಲಾಟೆ ನಡೆದಿದೆ. ಗಡಿ ನುಸುಳಲು ಯತ್ನಿಸಿದ್ದ ಚೀನಾ ಯೋಧರನ್ನ ಭಾರತೀಯ ಯೋಧರು ತಡೆದಿದ್ದಾರೆ.

Key words: INDIA- china- conflict-again