ಬೆಂಗಳೂರು, ಮೇ 27, 2020 : (www.justkannada.in news) ದೇಶದಲ್ಲಿ ಕರೋನ ವೈರಸ್ (COVID 19) ಪೀಡಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಅವಧಿಗೆ ಲಾಕ್‌ಡೌನ್ ವಿಸ್ತರಿಸುವ ಬಗೆಗೆ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಭಾರತದಲ್ಲಿ ಕರೋನಾ ಸೊಂಕಿತರ ಸಂಖ್ಯೆ ಹೆಚ್ಚಳದ ಕಾರಣ ನೀಡಿ ನೆರೆಯ ಚೀನಾ ದೇಶ, ಭಾರತದಲ್ಲಿನ ತನ್ನ ದೇಶವಾಸಿಗಳನ್ನು ತಾಯ್ನಾಡಿಗೆ ವಾಪಾಸ್ ಆಗುವಂತೆ ರಾಯಭಾರಿ ಕಚೇರಿ ಮೂಲಕ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಕೋವಿಡ್ ನಿಯಂತ್ರಣ ಸಂಬಂಧ ಈಗಾಗಲೇ ದೇಶದಲ್ಲಿ ನಾಲ್ಕು ಬಾರಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಮಾರ್ಚ್ 24ರ ಮಧ್ಯ ರಾತ್ರಿಯಿಂದ ಆರಂಭವಾದ ಲಾಕ್‌ಡೌನ್ ಮೇ 31 ರವರೆಗೂ ವಿಸ್ತರಿಸಲಾಗಿದೆ.
ಆಗ ಇನ್ನು ಮುಂದೆ ಲಾಕ್‌ಡೌನ್ ಮುಂದುವರೆಸುವುದಿಲ್ಲ ಎಂದೇ ಹೇಳಲಾಗಿತ್ತು. ಇದಕ್ಕೆ ಪೂರಕವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಂತ ಹಂತವಾಗಿ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಿತ್ತು.
ಆದರೆ ಇದೀಗ, ಕೋವಿಡ್ -19 (Covid-19) ವೈರಸ್ ಈ ಹಿಂದಿಗಿಂತಲೂ ವೇಗವಾಗಿ ಹರಡುತ್ತಿದೆ. ರಾಜ್ಯದ ಸ್ಥಿತಿಯನ್ನೇ ಪರಿಗಣನೆಗೆ ತೆಗೆದುಕೊಂಡರು ಕಳೆದ ವಾರದಿಂದ ಸರಾಸರಿ ಪ್ರತಿದಿನ ನೂರಕ್ಕೂ ಹೆಚ್ಚು ಸೊಂಕಿತರು ಕಂಡು ಬರುತ್ತಿದ್ದಾರೆ. ಇದು ಕೇವಲ ಕರ್ನಾಟಕದ ಸ್ಥಿತಿ ಮಾತ್ರವಲ್ಲ. ದೇಶದ ಇತರೆ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿರುವುದು ಆತಂಕಕ್ಕೆ ಎಡೆಮಾಡಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುಂದಿನ ನಡೆ ಬಗ್ಗೆ ಗಂಭೀರವಾಗಿ ಚಿಂತಿಸಿದೆ. ಈ ನಡುವೆ ವೈದ್ಯಕೀಯ ಕ್ಷೇತ್ರದ ತಜ್ಞರು ಕೇಂದ್ರ ಸರ್ಕಾರಕ್ಕೆ ಇನ್ನೂ 2 ವಾರಗಳ ಕಾಲ ಲಾಕ್‌ಡೌನ್ ವಿಸ್ತರಿಸುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದುದರಿಂದ ಜೂನ್ 15ರವರೆಗೂ ಲಾಕ್ ಡೌನ್ ವಿಧಿಸಬಹುದು ಎನ್ನಲಾಗಿದೆ.
key words : india-lock.down-extended-june.15-due-to-increse-in-corona-positive-cases