ನವದೆಹಲಿ,ಡಿಸೆಂಬರ್,16,2020(www.justkannada.in) : ಬಾಂಗ್ಲಾ ವಿಮೋಚನೆ ಭಾರತ-ಪಾಕಿಸ್ತಾನ ಯುದ್ಧಕ್ಕೆ 50 ವರ್ಷಗಳಾಗಿದ್ದು, ಬಾಂಗ್ಲಾ ವಿಮೋಚನೆಗೆ ಕಾರಣವಾದ ಯುದ್ಧದ ಗೆಲುವಿನ ಸ್ವರ್ಣ ಸಂಭ್ರಮಾಚರಣೆಯ ದಿನ ಆಚರಣೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಮ್ ವಿಜಯ್ ಮಾಷಲ್ ಜ್ಯೋತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಬೆಳಗಿದರು.
ಈ ಮೂಲಕ ಸ್ವರ್ಣಿಮ್ ವಿಜಯ ವರ್ಷ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರ ಯುದ್ಧ ಸ್ಮಾರಕಕ್ಕೆ ಆಗಮಿಸಿ ಸ್ವರ್ಣಿಮ್ ವಿಜಯ ದಿವಸದ ಲಾಂಛನವನ್ನು ಬಿಡುಗಡೆ ಮಾಡಿದರು.
ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥರು ಪ್ರಧಾನಮಂತ್ರಿಗಳನ್ನು ಸ್ವಾಗತಿಸಿದರು. ಬಳಿಕ ಹುತಾತ್ಮ ವೀರ ಯೋಧರಿಗೆ ಪ್ರಧಾನಿ ಮೋದಿಯವರು ಗೌರವ ಸಲ್ಲಿಸಿದರು. 1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಆಗ ಅದನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು.
key words : India-Pakistan-50years-war-victorious-golden-celebration