ಲಂಡನ್, ಜೂ.29, 2019 : (www.justkannada.in news ) ಭಾರತ ಕ್ರಿಕೆಟ್ ತಂಡದ ಆಟಗಾರರು ವಿಶ್ವಕಪ್ ಪಂದ್ಯಾವಳಿಯಲ್ಲಿ ಇದೇ ಮೊದಲ ಸಲ ಆರೆಂಜ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗ ವಿವಾದಕ್ಕೆ ಎಡೆಮಾಡಿದೆ.
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ‘ ಬ್ಲೂ ಬಾಯ್ಸ್ ‘ ಖ್ಯಾತಿಯ ತಂಡ ನಾಳೆ, ಕಿತ್ತಳೆ ಬಣ್ಣದ ಜರ್ಸಿ ಧರಿಸಿ ಫೀಲ್ಡ್ ಗಿಳಿದು ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್ ಮತ್ತು ಭಾರತ ತಂಡದ ಆಟಗಾರರ ಜೆರ್ಸಿ ಒಂದೇ ಬಣ್ಣದಿಂದ ಕೂಡಿದೆ. ಆದ್ದರಿಂದ ಯಾವುದಾದರೂಂದು ತಂಡ ಜೆರ್ಸಿ ಬಣ್ಣ ಬದಲಿಸಬೇಕಿತ್ತು. ಐಸಿಸಿ ನಿಯಮಾವಳಿ ಪ್ರಕಾರ ಆತಿಥೇಯ ತಂಡಕ್ಕೆ ಜೆರ್ಸಿ ಬಣ್ಣ ಬದಲಿಸಿಕೊಳ್ಳುವ ಅವಕಾಶವಿಲ್ಲದ ಕಾರಣ ಟೀಮ್ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿ ತೊಡುತ್ತಿದೆ.
ಈಗ ಇದನ್ನೇ ಒಂದು ವಿವಾದವನ್ನಾಗಿಸಲಾಗುತ್ತಿದೆ. ಕಾರಣ, ಮೆನ್ ಇನ್ ಬ್ಲೂ ಖ್ಯಾತಿಯ ಕೊಹ್ಲಿ ಬಳಗ ಕಿತ್ತಳೆ ಬಣ್ಣದ ಜೆರ್ಸಿ ಧರಿಸುವುದಕ್ಕೆ ದೇಶದಲ್ಲಿ ವ್ಯಾಪಕ ವಿರೋಧ ಕೇಳಿಬರುತ್ತಿದೆ. ಇದರ ಹಿಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡವಿದೆ. ಕೇಂದ್ರ ಸರ್ಕಾರವು ದೇಶವನ್ನು ಕೆಸರೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ.
—
key words : indian cricketers wearing orange jersey tomorrow and face england team, become controversy
the Congress and Samajwadi Party have opposed the orange jerseys that will be sported by the Indian cricket team when they play against England in the 2019 World Cup match on June 30.