ಮೈಸೂರು,ಜೂ,9,2020(www.justkannada.in): ಕೆಆರ್ ಎಸ್ ನಲ್ಲಿ ನಾಲ್ವಡಿಯವರ ಸರಿಸಮನಾಗಿ ವಿಶ್ವೇಶ್ವರಯ್ಯನವರ ಪ್ರತಿಮೆಗೆ ನಮ್ಮ ವಿರೋಧವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರ ಏಕಮಾತ್ರ ಪ್ರತಿಮೆ ನಿರ್ಮಿಸಬೇಕು ಎಂದು ಬಿವಿಎಸ್ ನ ಗಣೇಶ್ ಮೂರ್ತಿ ಒತ್ತಾಯಿಸಿದರು.
ಕೆಆರ್ ಎಸ್ ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರ ಏಕಮಾತ್ರ ಪ್ರತಿಮೆ ನಿರ್ಮಿಸುವಂತೆ ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಸಂಘದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಬಿವಿಎಸ್ ನ ಗಣೇಶ್ ಮೂರ್ತಿ ಅವರು, ಕೆಆರ್ ಎಸ್ ನಲ್ಲಿ ನಾಲ್ವಡಿಯವರ ಸರಿಸಮನಾಗಿ ವಿಶ್ವೇಶ್ವರಯ್ಯನವರ ಪ್ರತಿಮೆಗೆ ನಮ್ಮ ವಿರೋಧವಿದೆ. ನಾಡಿಗೆ ಅವರ ಸೇವೆ ಅದ್ವಿತೀಯ. ಕೇವಲ ವಿಶ್ವೇಶ್ವರಯ್ಯನವರ ಪ್ರತಿಮೆಗೆ ಮಾತ್ರವೇ ಪ್ರಾಮುಖ್ಯತೆ ನೀಡುತ್ತಿರುವುದು ಸರಿಯಲ್ಲ. ಪ್ರತಿಮೆ ನಿರ್ಮಾಣ ಮಾಡುವುದಿದ್ದರೆ ಮೈಸೂರು ಸಂಸ್ಥಾನದಲ್ಲಿ ಸೇವೆ ಸಲ್ಲಿಸಿದ ಐದು ದಿವಾನರ ಚಿಕ್ಕ ಪ್ರತಿಮೆಗಳನ್ನು ನಿರ್ಮಾಣ ಮಾಡಿ ಎಂದು ಒತ್ತಾಯಿಸಿದರು.
ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಎಂದು ಹೇಳುತ್ತೇವೆಯೇ ಹೊರತು ಅವರ ಅಧೀನದಲ್ಲಿ ಮುಖ್ಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದವರ ಹೆಸರು ಹೇಳುವುದಿಲ್ಲ. ಆದ್ದರಿಂದ ನಾಲ್ವಡಿಯವರ ಏಕಮಾತ್ರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಗಣೇಶ್ ಮೂರ್ತಿ ಸರ್ಕಾರಕ್ಕೆ ಒತ್ತಾಯಿಸಿದರು.
Key words: Indian- Students -Union – demanded – statue -Nalvadi Krishnaraja Wodeyar – KRS.