ಬೆಂಗಳೂರು,ಡಿಸೆಂಬರ್,27,2020(www.justkannada.in) : ಕೊರೊನಾದಿಂದ ದೇಶದಲ್ಲಿ ಹಲವು ಸಮಸ್ಯೆಗಳಾಗಿದೆ. ಜನರ ಯೋಚನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಜನರು ಹೆಚ್ಚಿನ ಪ್ರಮಾಣದಲ್ಲಿ ಸ್ವಾವಲಂಬಿಗಳಾಗುತ್ತಿದ್ದಾರೆ. ಸ್ವದೇಶಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ, 2021ರ ಭಾರತ ಹೊಸ ಸಾಧನೆಯ ಶಿಖರಕ್ಕೆ ಏರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
2020ರ ಕೊನೆಯ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಅವರು, ಪ್ರತಿ ಸಂಕಷ್ಟದಿಂದಲೂ ಹೊಸ ಪಾಠ ಕಲಿಯಬೇಕು. ದೇಶವು ಸಂಕಷ್ಟಗಳನ್ನು ಮೆಟ್ಟಿ ನಿಂತು ಮುಂದಕ್ಕೆ ಸಾಗುತ್ತಿದೆ. ಸ್ವಾವಲಂಬಿ ಭಾರತ ಕಟ್ಟುವಲ್ಲಿ ದೇಶದ ಜಜನರು ಸಹಕರಿಸುತ್ತಿದ್ದಾರೆ ಎಂದರು.
ಉತ್ಪನ್ನಗಳ ಕ್ವಾಲಿಟಿ ವಿಚಾರದಲ್ಲಿ ರಾಜಿಯಾಗಬಾರದು. ಜಾಗತಿಕ ಮಟ್ಟದಲ್ಲಿ ನಮ್ಮ ಉತ್ಪನ್ನಗಳಿಗೆ ಬೇಡಿಕೆಯಿದೆ. ಹೊಸ ಸಾಮರ್ಥ್ಯದ ಭರವಸೆ ಆತ್ಮ ನಿರ್ಭಾರ್ ಆಗಿದೆ ಎಂದು ತಿಳಿಸಿದ್ದಾರೆ.
key words : India-new-2021-Climbing-peak-achievement-Prime Minister- Narendra Modi