ಭಾರತದ 72 ವರ್ಷಗಳ ಬಾಕಿ ಉಳಿದಿದ್ದ ಪ್ರಕರಣ ಅಂತಿಮವಾಗಿ ಇತ್ಯರ್ಥ.

ಕೋಲ್ಕತ್ತಾ, ಜನವರಿ 16, 2023(www.justkannada.in): ಭಾರತದ ಅತ್ಯಂತ ಹಳೆಯ ಪ್ರಕರಣ, ಅಂದರೆ 72 ವರ್ಷಗಳ ಹಳೆಯ ಪ್ರಕರಣವನ್ನು ಭಾರತದ ಅತ್ಯಂಹ ಹಳೆಯ ನ್ಯಾಯಾಲಯ ಪೀಠ ಕೊನೆಗೂ ಕಳೆದ ವಾರ ಇತ್ಯರ್ಥಗೊಳಿಸಿದೆ. ಇದು 1951ರಲ್ಲಿ ದಾಖಲಾಗಿದ್ದಂತಹ ಪ್ರಕರಣವಾಗಿದ್ದು, ಈ ನ್ಯಾಯಾಲಯದ ಹಾಲಿ ಮುಖ್ಯ ನ್ಯಾಯಾಧೀಶರಾದ ಪ್ರಕಾಶ್ ಶ್ರೀವಾಸ್ತವ ಅವರು ಈ ಪ್ರಕರಣ ದಾಖಲಾದ ಸುಮಾರು ಒಂದು ದಶಕದ ನಂತರ ಜನಿಸಿದ್ದಾರೆ.

ಈ ಹಿಂದೆ ಬರ್ಹಂವಪೋರೆ ಬ್ಯಾಂಕ್ ಲಿ.ಎಂದು ಕರೆಯಲಾಗುತ್ತಿದ್ದ ಸಂಸ್ಥೆಗೆ ಸೇರಿದಂಥಹ ಈ ಪ್ರಕರಣ ಕೊನೆಗೂ ಇತ್ಯರ್ಥವಾಗಿರುವುದು ಕೋಲ್ಕತ್ತಾ ಉಚ್ಛ ನ್ಯಾಯಾಲಯಕ್ಕೆ ನಿಟ್ಟುಸಿರು ಬಿಟ್ಟಂತಾಗಿದೆ. ಆದರೆ ಇದಾದ ನಂತರ ಅಂದರೆ, ೧೯೫೨ರಲ್ಲಿ ದಾಖಲಾಗಿರುವಂತಹ ಇನ್ನೂ ಬಾಕಿ ಉಳಿದಿರುವ ಐದು ವರ್ಷಗಳ  ಪೈಕಿ ೧೯೫೨ರಲ್ಲಿ ದಾಖಲಾಗಿರುವಂತಹ ಎರಡು ಪ್ರಕರಣಗಳ ಇನ್ನೂ ಇತ್ಯರ್ಥವಾಗಬೇಕಿದೆ.

ಇನ್ನುಳಿದ ಮೂರು ಪ್ರಕರಣಗಳ  ಪೈಕಿ, ಎರಡು ಸಿವಿಲ್ ವ್ಯಾಜ್ಯಗಳಾಗಿದ್ದು, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ವಿಚಾರಣೆ ನಡೆಯಲಿದೆ ಹಾಗೂ ಮತ್ತೊಂದು ಮದ್ರಾಸ್ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಇದೆ. ಮಾಲ್ಡಾದ ನ್ಯಾಯಾಲಯಗಳು ಈ ವ್ಯಾಜ್ಯಗಳ ವಿಚಾರಣೆಯನ್ನು ಮಾರ್ಚ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ಕ್ರಮವಾಗಿ ನಡೆಸಲಿವೆ.

ಜನವರಿ 9ರವರೆಗೆ ಬರ್ಹಂ ಪೋರ್ ಪ್ರಕರಣ ನ್ಯಾಷನಲ್ ಜ್ಯೂಡಿಷಿಯಲ್ ಡಾಟಾ ಗ್ರಿಡ್‌ ನಲ್ಲಿ ಅತ್ಯಂತಹ ಹಳೆಯ ವ್ಯಾಜ್ಯವೆಂದು ನಮೂದಿತಗೊಂಡಿತ್ತು. ಕಳೆದ ವರ್ಷ ಸೆಪ್ಟೆಂಬರ್ ೧೯ರಂದು ನ್ಯಾಯಾಧೀಶ ರವಿ ಕೃಷನ್ ಕಪೂರ್ ಅವರು ಈ ವ್ಯಾಜ್ಯಕ್ಕೆ ಸಂಬಂಧಪಟ್ಟ ದಾಖಲೆಗಳಿಗೆ ಸಹಿ ಮಾಡಿ, ಸೀಲ್ ಮಾಡಿ ಒಂದು ಬೆರಳಚ್ಚು ತಿದ್ದುಪಡಿಯನ್ನು ಮಾಡಿದ ನಂತರ ಅದನ್ನು ವಿಲೇವಾರಿ ಮಾಡಿದ್ದರಂತೆ.

ಈ ವ್ಯಾಜ್ಯದ ಹಿನ್ನೆಲೆ ನವೆಂಬರ್ 19,1948ರ ಅಂದಿನ ಕಲ್ಕತ್ತಾ ಉಚ್ಛ ನ್ಯಾಯಾಲಯ, ವ್ಯಾಜ್ಯಪೀಡಿತ ಬರ್ಹಂಮಪೋರೆ ಬ್ಯಾಂಕ್ ದಿವಾಳಿಯಾಗಿದ್ದು ಅದನ್ನು ಮುಚ್ಚುವಂತೆ ಆದೇಶಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಜನವರಿ 1,1951 ರಲ್ಲಿ ಕಟ್ಟಳೆ ಹೂಡಿ, ಅದನ್ನು ‘ಪ್ರಕರಣ ಸಂಖ್ಯೆ ೭೧/೧೯೫೧,’ ಎಂದು ನೋಂದಾಯಿಸಲಾಗಿತ್ತು.

ಬರ್ಹನಂಪೋರ್ ಬ್ಯಾಂಕ್, ಬಾಕಿ ಉಳಿಸಿಕೊಂಡಿದ್ದಂತಹ ಸಾಲಗಾರರಿಂದ ಬಾಕಿ ಹಣ ವಸೂಲಿ ಮಾಡುವುದಕ್ಕೆ ಸಂಬಂಧಿಸಿದಂತೆ ಹಲವು ವ್ಯಾಜ್ಯಗಳಲ್ಲಿ ಸಿಲುಕಿಕೊಂಡಿತ್ತು. ಈ ಪೈಕಿ ಹಲವು ಸಾಲಗಾರರು ಬ್ಯಾಂಕ್‌ ನ ಕ್ಲೇಮುಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದರು.

ದಾಖಲೆಗಳ ಪ್ರಕಾರ, ಬ್ಯಾಂಕ್‌ ನ ದಿವಾಳಿತನವನ್ನು ಪ್ರಶ್ನಿಸಿದ ವ್ಯಾಜ್ಯ ಉಚ್ಛ ನ್ಯಾಯಾಲಯದ ಮುಂದೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಬಂದಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ನ್ಯಾಯಾಧೀಶ ಕಪೂರ್ ಅವರು ನ್ಯಾಯಾಲಯದ ಲಿಕ್ವಿಡೇಟರ್ ಅವರಿಂದ ವರದಿಯೊಂದನ್ನು ನೀಡುವಂತೆ ಆದೇಶಿಸಿದರು. ಸೆಪ್ಟೆಂಬರ್ 19ರಂದು ಸಹಾಯಕ ಲಿಕ್ವಿಡೇಟರ್ ಅವರು ಈ ಪ್ರಕರಣವನ್ನು ಆಗಸ್ಟ್ ೨೦೦೬ರಲ್ಲೇ ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಆದರೆ ಅದು ದಾಖಲೆಗಳಲ್ಲಿ ಅಪ್‌ ಡೇಟ್ ಆಗಿರಲಿಲ್ಲ. ಹಾಗಾಗಿ ಇದು ಇನ್ನೂ ಬಾಕಿ ಇದೆ ಎಂದು ಪರಿಗಣಿಸಲಾಗಿತ್ತು.

ಬಂಗಾಳದ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಎರಡು ಹಳೆಯ ಪ್ರಕರಣಗಳ ಪೈಕಿ ನ್ಯಾಯಾಧೀಶ ಕಪೂರ್ ಅವರು ಆಗಸ್ಟ್ 23, 2022ರಂದು ಒಂದು ಪ್ರಕರಣದ ವಿಚಾರಣೆ ನಡೆಸಿದ್ದರು. ಓರ್ವ ವಕೀಲರು ಹಾಗೂ ವಿಶೇಷ ಅಧಿಕಾರಿಗೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಪಾರ್ಟಿಗಳನ್ನು ಭೇಟಿ ಮಾಡಿ, ಇತ್ಯರ್ಥಪಡಿಸುವಂತೆ ಸೂಚಿಸಿದ್ದರಂತೆ. ಆದರೆ 1952ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಹಳ ಕಡಿಮೆ ದತ್ತಾಂಶ ಲಭ್ಯವಿದೆಯಂತೆ.

ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ

Key words: India’s -72-year-pending -case – finally -settled.