ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ 4ನೇ ಸ್ಥಾನ !

ಬೆಂಗಳೂರು, ಜುಲೈ 09, 2023 (www.justkannada.in): ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

2022-23 ರಲ್ಲಿ ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP) ಲೆಕ್ಕಾಚಾರದ ಪ್ರಕಾರ ಶ್ರೀಮಂತ ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ.

ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ ಭಾರತದ ಶ್ರೀಮಂತ ರಾಜ್ಯಗಳ ಮೊದಲ ಸ್ಥಾನಗಳಲ್ಲಿವೆ. 400 ಬಿಲಿಯನ್ ಯುಎಸ್ಡಿ ಜಿಎಸ್ಡಿಪಿ ಹೊಂದಿರುವ ಮಹಾರಾಷ್ಟ್ರವು ಭಾರತದ ಅತ್ಯಂತ ಶ್ರೀಮಂತ ರಾಜ್ಯವಾಗಿದೆ.

ಕರ್ನಾಟಕವು 247.38 ಬಿಲಿಯನ್ ಯುಎಸ್ ಡಾಲರ್ ಜಿಎಸ್ಡಿಪಿಯೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ, ಈ ಮೂಲಕ ಕರ್ನಾಟಕವು ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಬರುತ್ತದೆ.

5ನೇ ಸ್ಥಾನದಲ್ಲಿಉತ್ತರ ಪ್ರದೇಶ 6ನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ, 7ರಲ್ಲಿ ರಾಜಸ್ಥಾನ, 8ನೇ ಸ್ಥಾನದಲ್ಲಿ ತೆಲಂಗಾಣ ಇದೆ.