ಬೆಂಗಳೂರು, ಡಿಸೆಂಬರ್ 18, 2022 (www.justkannada.in): 2024ರ ಅಂತ್ಯದ ವೇಳೆಗೆ ದೇಶದ ರಸ್ತೆ ಗುಣಮಟ್ಟವು ಅಮೆರಿಕದ ರಸ್ತೆಗೆ ಸಮನಾಗಿರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
95ನೇ ಎಫ್‍ಐಸಿಸಿಐ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಯನ್ನು ಮಾಡುತ್ತಿದ್ದೇವೆ ಎಂದಿದ್ದಾರೆ.
2024ರ ಅಂತ್ಯದ ವೇಳೆಗೆ ನಮ್ಮ ರಸ್ತೆ ಮೂಲ ಸೌಕರ್ಯವು ಅಮೆರಿಕ, ಇಂಗ್ಲೆಂಡ್‍ಗೆ ಸಮನಾಗಿರುತ್ತದೆ. ರಕು ವೆಚ್ಚವು ನಮ್ಮ ದೊಡ್ಡ ಸಮಸ್ಯೆಯಾಗಿದೆ. ಪ್ರಸ್ತುತ 14 ಪ್ರತಿಶತವಿದೆ. ಆದರೆ 2024ರ ಅಂತ್ಯದ ವೇಳೆಗೆ 9 ಪ್ರತಿಶತಕ್ಕೆ ಇಳಿಕೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ̣.
ಜಗತ್ತಿನಲ್ಲಿ ಜಾಗತಿಕ ಸಂಪನ್ಮೂಲವು ಶೇ.40ರಷ್ಟು ಖರ್ಚಾಗುತ್ತಿದೆ. ಇದರ ಬದಲಾಗಿ ನಿರ್ಮಾಣ ಕಾರ್ಯದಲ್ಲಿ ಬದಲಿ ವ್ಯವಸ್ಥೆಯನ್ನು ಮಾಡಿ, ಉಕ್ಕಿನ ಬಳಕೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಗಡ್ಕರಿ ತಿಳಿಸಿದ್ದಾರೆ.