ಬೆಂಗಳೂರು,ಫೆಬ್ರವರಿ,28,2021(www.justkannada.in) : ಕುಖ್ಯಾತ ಮನೆ ಕಳ್ಳರನ್ನು ಬಂಧಿಸಿ, 31 ಲಕ್ಷ ರೂ. ಮೌಲ್ಯದ 611 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ವರದಿಯಾಗಿದ್ದ ಮನೆ ಕಳ್ಳತನ ಪ್ರಕರಣಗಳ ಪತ್ತೆ ಸಂಬಂಧ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮೈಸೂರು ನಗರ ಸಿಸಿಬಿ ಘಟಕದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಕುಖ್ಯಾತ ಮನೆಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಫಯಾಜ್ ಅಹ್ಮದ್(54),ಭಾರತ್ ನಗರದ ಇಮ್ತಿಯಾಜ್ ಅಹಮದ್(43), ಮಂಡಿ ಮೊಹಲ್ಲಾದ ಮೊಹಮದ್ ಪರ್ವೀಜ್(41) ಒಟ್ಟು ಮೂವರನ್ನು ಬಂಧಿಸಲಾಗಿದೆ.
ವಿಚಾರಣೆ ಸಂದಂರ್ಭ ಎಚ್.ಡಿ.ಕೋಟೆ ತಾಲೂಕಿನ ಫಯಾಜ್ ಅಹ್ಮದ್(54) ಈಗಾಗಲೇ 24 ಸ್ವತ್ತಿನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸಜಾ ಬಂಧಿಯಾಗಿದ್ದಾನೆ. ಮಂಡಿ ಮೊಹಲ್ಲಾದ ಮೊಹಮದ್ ಪರ್ವೀಜ್ ಇದೇ ರೀತಿ ಬೇರೆ ಪ್ರಕರಣಗಳಲ್ಲಿ ಕಳುವು ಮಾಲು ಸ್ವೀಕರಿಸಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾನೆಂದು ತಿಳಿದು ಬಂದಿದೆ.
ನಗರದ ಡಿಸಿಪಿ ಗೀತಪ್ರಸನ್ನ, ಸಿಸಿಬಿ ಘಟಕದ ಎ.ಸಿ.ಪಿ ಸಿ.ಕೆ.ಅಶ್ವತ್ಥನಾರಾಯಣರವರ ಮಾರ್ಗದರ್ಶನದಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
key words : Infamous-house-thieves-Detention-31 lakhs-611 worth-Gram jewelry-seize