ಮೈಸೂರು,ಮೇ,7,2022(www.justkannada.in): ಶೈಕ್ಷಣಿಕ ಚಟುವಟಿಕೆಗಳ ಹಬ್ ಎಂದೇ ಖ್ಯಾತಿಯಾಗಿರುವ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ‘ಅಲೆನ್ ಕೆರಿಯರ್ ಇನ್ಸ್‌ಟಿಟ್ಯೂಟ್’ಸಹಯೋಗದಲ್ಲಿ ದಿ ಅಕಾಡೆಮಿಕ್ ಸಿಟಿ ಉಚಿತ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಇದಕ್ಕೆ ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಸಾಮಾನ್ಯವಾಗಿ ಪಾಲಕರಿಗೆ ತಮ್ಮ ಮಗು ಎಸ್ಸೆಸ್ಸೆಲ್ಸಿ ನಂತರ ಮುಂದೇನು ಮಾಡಬೇಕೆಂಬ ಎಂಬ ಚಿಂತೆ ಕಾಡುತ್ತದೆ. ಐಐಟಿ-ನೀಟ್-ಜೆಇಇ ಪರೀಕ್ಷೆಗೆ ತಯಾರಾಗುವುದು ಹೇಗೆ ಎಂಬ ಗೊಂದಲ ಇರುತ್ತದೆ. ಅದಕ್ಕಾಗಿ ವಿಜಯ ಕರ್ನಾಟಕ ಪತ್ರಿಕೆ ವೇದಿಕೆ ಕಲ್ಪಿಸಿದೆ. ಮೇ 8ರಂದು ಭಾನುವಾರ ಸಂಜೆ 4 ಗಂಟೆಗೆ ಬನ್ನಿಮಂಟಪದ ರಿಜೆಂಟಾ ಸೆಂಟ್ರಲ್ ಹೆರಾಲ್ಡ್ ಹೋಟೆಲ್‌ನಲ್ಲಿ ನಡೆಯುವ ಉಚಿತ ಸಂವಾದದಲ್ಲಿ ಮೈಸೂರು ಸುತ್ತಮುತ್ತಲಿನ ಪೋಷಕರು ಭಾಗವಹಿಸಿ ತಮ್ಮ ಗೊಂದಲ, ಸಂದೇಹವನ್ನು ಬಗೆಹರಿಸಿಕೊಳ್ಳಬಹುದು. ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ನಂತರದ ವ್ಯಾಸಂಗ ಪ್ರತಿ ಮಗುವಿನ ಬದುಕಿನಲ್ಲಿ ಪ್ರಮುಖ ಘಟ್ಟ. ಈ ಹಂತದಲ್ಲಿ ತೆಗೆದುಕೊಳ್ಳುವ ವಿಷಯವೇ ಮಗು ಮುಂದೆ ಏನಾಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಅಲ್ಲದೆ, ಪೋಷಕರಲ್ಲೂ ಮಗುವನ್ನು ಯಾವ ಕಾಲೇಜಿಗೆ ಸೇರಿಸಬೇಕು? ಎಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ? ಐಐಟಿ-ನೀಟ್-ಜೆಇಇ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವುದು ಹೇಗೆ? ಎಲ್ಲಿ ಬೆಸ್ಟ್ ಟ್ರೈನಿಂಗ್ ಸಿಗುತ್ತದೆ? ತಮ್ಮ ಮಗುವನ್ನು ವಸತಿ ಶಾಲೆಗೆ ಏಕೆ ಸೇರಿಸಬೇಕು? ಅಲ್ಲಿ ಸಿಗುವಂತಹ ಸೌಲಭ್ಯಗಳು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಹೇಗೆ ಅನುಕೂಲ ಕಲ್ಪಿಸುತ್ತದೆ ಎಂಬ ಸಂಗತಿಗಳು ಸಹಜವಾಗಿಯೇ ಕಾಡುತ್ತದೆ. ಎಸ್ಸೆಸ್ಸೆಲ್ಸಿ ನಂತರ ಪೋಷಕರು ಮಗುವಿಗೆ ಸರಿಯಾದ ಕಾಲೇಜು ಅಥವಾ ವಸತಿ ಶಾಲೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ವೇಳೆ ಏನಾದರೂ ಪೋಷಕರು ತಪ್ಪು ನಿರ್ಧಾರ ತೆಗೆದುಕೊಂಡರೆ ಮಗು ಬದುಕಿನ ಪೂರ್ತಿ ನೋವನ್ನು ಅನುಭವಿಸಬೇಕಾಗುತ್ತದೆ.
ಈ ನಿಟ್ಟಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ಪೋಷಕರಿಗೆ ಅಗತ್ಯ ಮಾರ್ಗದರ್ಶನ, ಮಾಹಿತಿ ಹಾಗೂ ಸಲಹೆ ನೀಡಲು ‘ಅಲೆನ್ ಕೆರಿಯರ್ ಇನ್ಸ್‌ಟಿಟ್ಯೂಟ್’ ಸಹಯೋಗದಲ್ಲಿ ಸಂವಾದ ಆಯೋಜನೆ ಮಾಡಿದೆ. 10 ನೇ ತರಗತಿಯ ನಂತರ, ಸರಿಯಾದ ಶಾಲೆ ಮತ್ತು ವಾತಾವರಣವನ್ನು ಆಯ್ಕೆ ಮಾಡುವುದು ಮಗುವಿನ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ನಿರ್ಣಾಯಕ ತೀರ್ಮಾನವಾಗಿರುವುದರಿಂದ ಪೋಷಕರು ಈ ಸೆಮಿನಾರ್ ನಲ್ಲಿ ಭಾಗವಹಿಸಿ ಶಿಕ್ಷಣ ತಜ್ಞರಿಂದ ಅಗತ್ಯ ಹಾಗೂ ಉಚಿತ ಮಾರ್ಗದರ್ಶನವನ್ನು ಪಡೆಯಬಹುದಾಗಿದೆ. ಈಗಾಗಲೇ ಶಿಕ್ಷಣ ಕ್ಷೇತ್ರ ಹಾಗೂ ವಿಜ್ಞಾನ ವಿಷಯದಲ್ಲಿ ಪರಿಣಿತಿ ಸಾಧಿಸಿರುವ ನುರಿತ ತಜ್ಞರೇ ನಿಮಗೆ ಸೂಕ್ತ ಸಲಹೆಗಳನ್ನು ನೀಡಲಿದ್ದಾರೆ. ಇದರಿಂದ ನಿಮ್ಮ ಮಗುವಿಗೆ ಉತ್ತಮ ಭವಿಷ್ಯ ಕಲ್ಪಿಸಲು ಪೋಷಕರು ಈ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳಬಹುದು.
ಹೆಸರು ನೋಂದಾಯಿಸಿದವರಿಗೆ ಮಾತ್ರ ಮೈಸೂರಿನಲ್ಲಿ ನಡೆಯುವ ಸಂವಾದದಲ್ಲಿ ಭಾಗವಹಿಸಲು ಅವಕಾಶ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಮೊ.7353015333.
ದಿನಾಂಕ: 8/05/2022, ಭಾನುವಾರ
ಸಮಯ: ಸಂಜೆ 4 ಗಂಟೆ
* ಎಲ್ಲಾ ನೋಂದಾಯಿತ ವಿದ್ಯಾರ್ಥಿಗಳಿಗೆ ಉಚಿತ ಸೈಕೋಮೆಟ್ರಿಕ್ ಟೆಸ್ಟ್ ಇದ್ದು, ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಬೇಕು. ನೋಂದಾಯಿತ ವಿದ್ಯಾರ್ಥಿಗಳು ಸ್ಥಳದಲ್ಲೇ ಸೈಕೋಮೆಟ್ರಿಕ್ ಟೆಸ್ಟ್ ಕೂಡ ತೆಗೆದುಕೊಳ್ಳಬಹುದು.
Key words: Information – experts – tomorrow- SSLC -course.