ಮೈಸೂರು, ಸೆಪ್ಟೆಂಬರ್,10,2020(www.justkannada.in) : ರೇಷ್ಮೆಯಲ್ಲಿನ ವಿವಿಧ ಮಾದರಿಗಳ ತಿಳಿಯಲು, ಬೇರೆಡೆಗಳಲ್ಲಿ ರೇಷ್ಮೆ ವ್ಯವಹಾರ, ಅಧ್ಯಯನ ಸೇರಿದಂತೆ ಇತರೆ ಮಾಹಿತಿ ಪಡೆಯಲು ವೆಬಿನಾರ್ ಗಳು ಸಹಕಾರಿ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.
ಮೈಸೂರು ವಿವಿ ಸೆರಿಕಲ್ಚರ್(ರೇಷ್ಮೆಕೃಷಿ) ವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ‘’ಕಾಡು ರೇಷ್ಮೆ ಪತಂಗಗಳ ವೈವಿಧ್ಯತೆ ಮತ್ತು ಭಾರತದಲ್ಲಿ ಅದರ ಹೊರಗಿನ ಸ್ಥಳ ಮತ್ತು ಒಳಗಿನ ಸ್ಥಳ ಸಂರಕ್ಷಣೆ’’ ಕುರಿತ ವೆಬಿನಾರ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೇಷ್ಮೆ ಕೃಷಿ ಸಂಬಂಧಿಸಿದಂತೆ ಸೆರಿಕಲ್ಚರ್(ರೇಷ್ಮೆಕೃಷಿ) ವಿಜ್ಞಾನ ಅಧ್ಯಯನ ವಿಭಾಗವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕೊರೊನಾ ನಡುವೆಯೂ ವೆಬಿನಾರ್ ಮೂಲಕ ರೇಷ್ಮೆ ಬೆಳವಣಿಗೆ, ಆರ್ಥಿಕತೆ ಹೀಗೆ ಎಲ್ಲದರ ಮೇಲೂ ಬೆಳಕು ಚೆಲ್ಲುವ ಕಾರ್ಯವನ್ನು ಮಾಡುತ್ತಿರುವುದು ಸಂತೋಷದ ವಿಷಯ ಎಂದರು.
ಜಮ್ಮು ಕಾಶ್ಮೀರ (ಭಾರತ) ಪಂಪೋರ್ನ ಸಸ್ಯ ವಿಭಾಗ ಸಿಎಸ್ಆರ್ ನ ಮುಖ್ಯಸ್ಥ ಡಾ.ರಾಜೇಶ್ ಕುಮಾರ್ ಮಾತನಾಡಿ, ಭಾರತದಲ್ಲಿರುವ ರೇಷ್ಮೆಯಲ್ಲಿ ಹಲವು ವಾಣಿಜ್ಯ ರೇಷ್ಮೆ ಮಾದರಿಗಳಿವೆ. ಅವುಗಳ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಇದರಿಂದ ಹೆಚ್ಚಿನ ಮಟ್ಟದಲ್ಲಿ ಉತ್ಪಾದನೆ ಸಾಧ್ಯವಿದೆ. ಇದರಿಂದ ದೇಶದ ಆರ್ಥಿಕತೆಗೆ ಹೆಚ್ಚಿನ ಸಹಾಯವಾಗಲಿದೆ ಎಂದರು.
ರೇಷ್ಮೆ ಉತ್ಪಾದನೆಯು ಉದ್ಯಮವಾಗಿದ್ದು, ಚೀನಾ ಮತ್ತು ಭಾರತ ಎರಡು ಪ್ರಮುಖ ಉತ್ಪಾದಕರಾಗಿದ್ದಾರೆ. ವಿಶ್ವದ ವಾರ್ಷಿಕ ಉತ್ಪಾದನೆಯು 60% ಕ್ಕಿಂತ ಹೆಚ್ಚಿದೆ ಎಂದು ವಿವರಿಸಿದರು.
ಸಿರಿಕಲ್ಚರ್ ಸೈನ್ಸ್ ವಿಭಾಗದ ಮಖ್ಯಸ್ಥ ಡಾ.ಬಿ.ಸಣ್ಣಪ್ಪ, ಸಹಾಯಕ ಪ್ರಾಧ್ಯಾಪಕ ಡಾ.ಆರ್.ಎಸ್. ಉಮಾಕಾಂತ್, ಅನಿಲ್ ಕುಮಾರ್ ಸೇರಿದಂತೆ ಅನೇಕರು ವೆಬಿನಾರ್ ನಲ್ಲಿ ಭಾಗವಹಿಸಿದ್ದರು.
key words : Information-sharing-webinar-between-Corona-best-way-Mysore VV Chancellor-Prof G.Hemant Kumar