ಮೈಸೂರು ವಿವಿ 100 ನೇ ಘಟಿಕೋತ್ಸವ : ಇನ್ಫೋಸಿಸ್ ಸುಧಾಮೂರ್ತಿ ‘ಗೌರವ ಡಾಕ್ಟರೇಟ್’ ಗೆ ಆಯ್ಕೆ.

 

ಮೈಸೂರು, ಅ.16, 2020 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 100 ನೇ ಘಟಿಕೋತ್ಸವದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.

jk-logo-justkannada-logo

ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಈ ವಿಷಯ ತಿಳಿಸಿದರು.
ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಸುಧಾಮೂರ್ತಿ ಅವರು ಕೈಗೊಂಡಿರುವ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಹಾಗೂ ಅವರ ವೈಯಕ್ತಿಕ ಸಾಧನೆ ಪರಿಗಣಿಸಿ ಅವರಿಗೆ ಮೈಸೂರು ವಿವಿಯ ಈ ಸಾಲಿನ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದರು.

ಪ್ರಸ್ತುತ ಕರೋನಾ ಸಂಕಷ್ಟದ ಸಮಯವಾದ್ದರಿಂದ ಖುದ್ದು ಸುಧಾಮೂರ್ತಿ ಅವರೇ ಆಗಮಿಸಿ ಗೌರವ ಡಾಕ್ಟರೇಟ್ ಸ್ವೀಕರಿಸುವ ಪರಿಸ್ಥಿತಿ ಇಲ್ಲ. ಆದ್ದರಿಂದ ಘಟಿಕೋತ್ಸವದ ಬಳಿಕ ಅವರ ನಿವಾಸಕ್ಕೆ ತೆರಳಿ ಮೈಸೂರು ವಿವಿ ವತಿಯಿಂದಲೇ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

infosys-foundation-sudhamurthi-awarded-honorary-doctorate-by-university-of-Mysore-for-100th -convocation-vc-prof.g.hemanthkumar

oooo

key words : infosys-foundation-sudhamurthi-awarded-honorary-doctorate-by-university-of-Mysore-for-100th -convocation-vc-prof.g.hemanthkumar